ಬೆಂಗಳೂರು: ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿಮಾನಿಗಳ ಜೊತೆಗೆ ಕೆಲವು ಸಮಯ ಕಳೆದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.ಕೊರೊನಾದಿಂದ ಬಹಳ ದಿನಗಳಿಂದ ಸುದೀಪ್ ಅವರು ಅಭಿಮಾನಿಗಳನ್ನ ಭೇಟಿ ಮಾಡಿರಲಿಲ್ಲ. ಇಂದು ಬೆಳಗ್ಗೆ ಮನೆ ಬಳಿ ಸೇರಿದ್ದರು. ಸೂಪರ್ ಸಂಡೇಯನ್ನು ಕಿಚ್ಚ ಅಭಿಮಾನಿಗಳ ಜೊತೆಗೆ ಕಳೆದಿದ್ದಾರೆ. ಇದನ್ನೂ ಓದಿ:  ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್ಜೆ.ಪಿ ನಗರದ ಸುದೀಪ್ ಮನೆ ಮುಂದೆ ಸೇರಿದ ಕಿಚ್ಚನ ಅಭಿಮಾನಿಗಳು ಸೇರಿದ್ದರು. ಈ ವೇಳೆ ಸುದೀಪ್ ಅವರು ಫೋಟೋ ಕ್ಲಿಕಿಸಿಕೊಂಡು ಆಟೋ ಗ್ರಾಫ್ ಕೊಟ್ಟಿದ್ದಾರೆ. ಸುಮಾರು 11 ಗಂಟೆಗೆ ಮನೆಯಿಂದ ಹೊರಗೆ ಬಂದ ಕಿಚ್ಚ ಬಹಳ ಸಮಯ ಅಭಿಮಾನಿಗಳ ಜೊತೆ ಕಾಲ ಕಳೆದಿದ್ದಾರೆ. ಈ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಗ್ಯಾಂಗ್ ಸ್ಟಾರ್ ಅವತಾರದಲ್ಲಿ ದೊಡ್ಮನೆ ಕುಡಿಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್‍ನ ವಿಕ್ರಾಂತ್ ರೋಣ ಸಿನಿಮಾದ ಕೆಲಸ ಬಹುತೇಕ ಮುಗಿದಿದೆ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕೋವಿಡ್ ಮತ್ತು ಸರ್ಕಾರದ ಕೆಲವು ನಿಯಮಗಳಿಂದಾಗಿ ಬಿಡುಗಡೆ ಎರಡೆರಡು ಬಾರಿ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ. ಈ ಬಾರಿ ಪಕ್ಕಾ ದಿನಾಂಕವನ್ನು ಗೊತ್ತು ಮಾಡಿಕೊಂಡು ಅಖಾಡಕ್ಕೆ ಇಳಿಯಲಿದೆಯಂತೆ ಚಿತ್ರತಂಡ. ಇದನ್ನೂ ಓದಿ: ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?ಅನೂಪ್ ಭಂಡಾರಿ ಜೊತೆ ಸುದೀಪ್ ಅವರು ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ ಅದನ್ನು ಇಷ್ಟು ಬೇಗ ಸುದೀಪ್ ಅವರು ಬಹಿರಂಗ ಪಡಿಸುತ್ತಾರೆ ಅಂದುಕೊಂಡಿರಲಿಲ್ಲ. ಸುದ್ದಿ ಬಹಿರಂಗವಾಗಿದ್ದರೂ, ಸಿನಿಮಾ ಆಗುವುದು ಸದ್ಯಕ್ಕಂತೂ ಅಲ್ಲ.Sign in to your account
Username or Email Address


Password

 Remember Me


