ಬೆಳಗಾವಿ: ಯುದ್ಧಪೀಡಿತ ಉಕ್ರೇನ್‍ನಿಂದ ಬೆಳಗಾವಿಯ ಎಂಬಿಬಿಎಸ್ ವಿದ್ಯಾರ್ಥಿನಿ ಫೈಜಾ ಸುಬೇದಾರ್ ಸುರಕ್ಷಿತವಾಗಿ ಆಗಮಿಸಿದ್ದು, ಕುಟುಂಬಸ್ಥರಲ್ಲಿ ಸಂಭ್ರಮ ಮನೆಮಾಡಿದೆ.ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ಫೈಜಾ ಸುಬೇದಾರ್ ವಿದ್ಯಾರ್ಥಿನಿಯನ್ನು ಅಂಬೇಡ್ಕರ್ ಜನಜಾಗೃತಿ ವೇದಿಕೆಯಿಂದ ಸ್ವಾಗತಿಸಿಕೊಳ್ಳಲಾಯಿತು. ಮಗಳು ಸುರಕ್ಷಿತವಾಗಿ ಮರಳಿದ ಹಿನ್ನೆಲೆ ಕುಟುಂಬಸ್ಥರಲ್ಲಿಯೂ ಸಂಭ್ರಮ ಮನೆಮಾಡಿತು. ಇದನ್ನೂ ಓದಿ:  ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಫೈಜಾ, ನಾವು ರೊಮೇನಿಯಾ ಗಡಿಗೆ ಬಂದು ಅಲ್ಲಿಂದ 12 ಗಂಟೆ ಪ್ರಯಾಣ ಮಾಡಿ ಏರ್‍ಪೆÇೀರ್ಟ್ ತಲುಪಿದ್ವಿ. ನಾವು ಉಕ್ರೇನ್ ಪಶ್ಚಿಮ ಭಾಗದಲ್ಲಿ ಇದ್ವಿ. ಅಲ್ಲಿ ಅಷ್ಟೊಂದು ತೊಂದರೆ ಇರಲಿಲ್ಲ. ನಮ್ಮ ಭಾರತ ಸರ್ಕಾರದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸಂತೋಷ ವ್ಯಕ್ತಪಡಿಸಿದರು.ನಾವು ವಾಪಾಸ್ ಆಗಿರುವುದು ಬಹಳ ಸಂತೋಷ ಆಗ್ತಿದೆ. ಇದಕ್ಕೆ ಕಾರಣವಾದ ಪ್ರಧಾನಿ ಮೋದಿ ಅವರಿಗೂ ಧನ್ಯವಾದ ತಿಳಿಸುತ್ತೇನೆ. ಯುದ್ದ ಆರಂಭವಾದಾಗ ನಮಗೆ ಬಹಳ ಭಯ ಅನಿಸಿತ್ತು. ನಾನು ವೆಸ್ಟರ್ನ್ ಉಕ್ರೇನ್‍ದಲ್ಲಿದ್ದೆ. ಅಲ್ಲಿ ಯುದ್ಧದ ಭೀತಿ ಇರಲಿಲ್ಲ. ಏಕಾಏಕಿ ಯುದ್ದ ಆರಂಭವಾಗಿದನ್ನು ಕೇಳಿ ಶಾಕ್ ಆಯ್ತು. ಬೆಳಂಬೆಳಗ್ಗೆ ಐದು ಗಂಟೆಗೆ ಯುದ್ಧ ಆರಂಭವಾದ ಸುದ್ದಿ ತಿಳಿಯಿತು. ಯಾರು ಕೂಡ ರಷ್ಯಾ ಯುದ್ಧ ಮಾಡುತ್ತೆ ಎಂದು ಊಹೆಯನ್ನೂ ಸಹ ಮಾಡಿಕೊಂಡಿರಲಿಲ್ಲ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.ಮೊದಲ ವಿಮಾನದಲ್ಲಿ ನಾನು ವಾಪಸ್ ಬಂದಿದ್ದಕ್ಕೆ ಬಹಳ ಖುಷಿಯಾಗ್ತಿದೆ. ನಮ್ಮ ವಿಮಾನದಲ್ಲಿ ಹದಿನೈದು ಜನ ವಿದ್ಯಾರ್ಥಿಗಳು ವಾಪಸ್ ಬಂದ್ರು. ಮುಂಬೈನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನಮ್ಮನ್ನು ಸ್ವಾಗತಿಸಿದ್ರು. ಖಾರ್ಕೀವ್‍ನಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಅಗೌರವದಿಂದ ನೋವಾಗಿದೆ: ಬಿಜೆಪಿ ಸೇರ್ಪಡೆಯಾದ ಗುಲಾಂ ನಬಿ ಸೋದರಳಿಯಖಾರ್ಕೀವ್, ಕೀವ್‍ನಲ್ಲಿದ್ದ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆಯಸಿಕೊಳ್ಳಬೇಕು. ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ, ಊಟಕ್ಕೂ ಅವರಿಗೆ ತುಂಬಾ ತೊಂದರೆ ಆಗ್ತಿದೆ. ಹೀಗಾಗಿ ನನ್ನಂತೆ ಅವರನ್ನು ಸುರಕ್ಷಿತವಾಗಿ ಮರಳಿ ದೇಶಕ್ಕೆ ಬರಬೇಕು ಎಂದು ಕೋರಿಕೊಂಡರು.Sign in to your account
Username or Email Address


Password

 Remember Me


