ಮಂಗಳೂರು: ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ, ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ  ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಶ್ರಾವ್ಯ(22) ಮೃತ ಯುವತಿ. ಈಕೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ನಿವಾಸಿಯಾಗಿದ್ದಾಳೆ. ಟೂತ್‌ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಿದ್ದಾಳೆ.  ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!ಮನೆಯ ಬಾತ್ ರೂಂನ ಕಿಟಕಿ ಬಳಿಯಲ್ಲಿ ಇಲಿ ಪಾಷಾಣ ಹಾಗೂ ಟೂತ್ ಪೇಸ್ಟ್‌ನ್ನು ಒಟ್ಟಿಗೆ ಇಡಲಾಗಿತ್ತು. ಕತ್ತಲಿದ್ದರಿಂದ ಇಲಿ ಪಾಷಾಣ ಕೈಗೆತ್ತಿಕೊಂಡಿದ್ದ ಯುವತಿ ಹಲ್ಲುಜ್ಜಿದ್ದಾಳೆ. ಇಲಿ ಪಾಷಾಣ ಎಂದು ತಡವಾಗಿ ಯುವತಿಗೆ ಗೊತ್ತಾಗಿದೆ. ನಂತರ ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ನಿರಾಣಿ ಸಕ್ಕರೆ ಕಾರ್ಖಾನೆ ವೀಕ್ಷಿಸಿದ ಉತ್ತರ ಪ್ರದೇಶದ ರಾಜ್ಯಪಾಲೆSign in to your account
Username or Email Address


Password

 Remember Me


