ಚಂದನವನದ ಸಿಂಪಲ್ ಬ್ಯೂಟಿ ಶ್ವೇತಾ ಶ್ರೀವಾತ್ಸವ್ ಸಿನಿಮಾ ಜೊತೆಗೆ ಸಮಾಜಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರ ಫೋಟೋಗಳನ್ನು ನೋಡಿ ನೆಟ್ಟಿಗರು ನೀವು ನಿಜ ಜೀವದಲ್ಲಿಯೂ ಹೀರೋಯಿನ್ ಆಗಿದ್ದೀರಾ ಎಂದು ಪ್ರಶಂಸುತ್ತಿದ್ದಾರೆ.ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ತಮ್ಮ ಅಪ್ಡೇಟ್‍ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇನ್‍ಸ್ಟಾಗ್ರಾಮ್ ನಲ್ಲಿ ಶ್ವೇತಾ, ದಯೆ ಒಂದು ಆಯ್ಕೆಯಾಗಿದೆ. ದಯೆ ಯಾವಾಗಲೂ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಈ ವೇಳೆ ತನ್ನ ಹೊಸ ಯೋಜನೆ ಬಗ್ಗೆ ಹೇಳಿಕೊಂಡಿರುವ ಅವರು, ಹೊಸ ಯೋಜನೆ, ಹೊಸ ಸ್ನೇಹ, ಹೊಸ ಪ್ರಾರಂಭ ಎಂದು ಬರೆದು ತಿಳಿಸಿದ್ದಾರೆ. ಶ್ವೇತಾ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಕ್ಕಳಿಗೆ ಅನ್ನದಾಸೋಹ ಮಾಡಿಸುತ್ತಿರುವ ದೃಶ್ಯ ಫೋಟೋಗಳಲ್ಲಿ ನೋಡಬಹುದು. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!  A post shared by Shwetha Srivatsav (@shwethasrivatsav)ಈ ಮೂಲಕ ಅಭಿಮಾನಿಗಳಿಗೆ ನಾನು ಹೊಸದೊಂದು ಯೋಜನೆಯನ್ನು ಮಾಡುತ್ತಿದ್ದೇನೆ. ಅದು ಸಮಾಜಕ್ಕೆ ಒಳ್ಳೆಯದಾಗುವ ಸೇವಾ ಕಾರ್ಯ ಎಂಬುದು ಫೋಟೋ ನೋಡಿದರೆ ಅರ್ಥವಾಗುತ್ತೆ. ಈ ಕುರಿತು ಸೂಕ್ಷ್ಮವಾಗಿ ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಅಲಿಯಾ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನುಪೋಸ್ಟ್ ನೋಡಿದ ನೆಟ್ಟಿಗರು, ನೀವು ನಿಜ ಜೀವನದ ಹೀರೋಯಿನ್ ಮೇಡಮ್. ಆಲ್ ದಿ ಬೆಸ್ಟ್, ಗುಡ್ ಲಕ್ ಎಂದು ಕಮೆಂಟ್ ಮಾಡಿದ್ದಾರೆ.Sign in to your account
Username or Email Address


Password

 Remember Me


