ಬೆಂಗಳೂರು: ಸ್ಯಾಂಡಲ್‍ವುಡ್ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.ಚಂದನ್ ಹಾಗೂ ನಿವೇದಿತಾ ಗೌಡ ಆಗಾಗ ಫೋಟೋ ಹಾಗೂ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಇತ್ತೀಚೆಗಷ್ಟೇ ಚಂದನ್ ಲಕ್ ಲಕ್ ಲಂಬೋರ್ಗಿನಿ ಹಾಡು ಬಿಡುಗಡೆ ಮಾಡಿದ್ದರು. ಇನ್ನೂ ಈ ಹಾಡು ಸಖತ್ ಸದ್ದು ಮಾಡಿತ್ತು. ಸದ್ಯ ಚಂದನ್ ನಿವೇದಿತಾ ಕೈ ಹಿಡಿದು ಇಂದಿಗೆ 2 ವರ್ಷ ತುಂಬಿದ್ದು, ಇದೇ ಖುಷಿಯಲ್ಲಿ ಜೋಡಿ ಔಟ್ ಆಫ್ ಸ್ಟೇಷನ್‍ನಲ್ಲಿ ಟೂರ್ ಹೊಡೆಯುತ್ತಿದ್ದಾರೆ.  A post shared by Niveditha Gowda ???? (@niveditha__gowda)ಈ ವಿಶೇಷ ದಿನದಂದು ನಿವೇದಿತಾ ಗೌಡ ತಮ್ಮ ಮದುವೆಯ ಫೋಟೋಗಳನ್ನು ಕೊಲಾಜ್ ಮಾಡಿರುವ ಪುಟ್ಟ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಇನ್ನೂ ಈ ಕ್ಯೂಟ್ ಜೋಡಿಗೆ ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ! A post shared by Niveditha Gowda ???? (@niveditha__gowda)ಬಿಗ್‍ಬಾಸ್ ಸೀಸನ್-5ರಲ್ಲಿ ಖ್ಯಾತಿ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದರು. ಮೈಸೂರಿನ ದಸರಾ ಕಾರ್ಯಕ್ರಮದ ವೇಳೆ ಚಂದನ್ ನಿವೇದಿತಾ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ನಿವೇದಿತಾ ಮುಂದೆ ಮದುವೆ ಪ್ರಪೋಸಲ್ ಇಟ್ಟರು. ಈ ವೇಳೆ ಚಂದನ್ ಪ್ರೀತಿಗೆ ಮನಸೋತು ನಿವೇದಿತಾ ಗೌಡ ಕೂಡ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.  A post shared by Niveditha Gowda ???? (@niveditha__gowda)ನಂತರ 2020ರ ಫೆಬ್ರವರಿ 27ರಂದು ಮೈಸೂರಿನಲ್ಲಿ ಶುಭ ಮೂಹೂರ್ತದಲ್ಲಿ ಶುಭ ಮೂಹೂರ್ತದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಚಂದನ್ ನಿವೇದಿತರನ್ನು ವರಿಸಿದರು. ಈ ಜೋಡಿ ಮದುವೆಗೆ ಅನೇಕ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಕೋರಿದ್ದರು. ಇದನ್ನೂ ಓದಿ: ದೇಶ ವಿದೇಶದಲ್ಲಿ ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್!Sign in to your account
Username or Email Address


Password

 Remember Me


