ಚಿಕ್ಕಬಳ್ಳಾಪುರ: ಭಾರೀ ಸ್ಫೋಟದ ತೀವ್ರತೆಗೆ ಇಡೀ ಮನೆ ಸಂಪೂರ್ಣ ಛಿದ್ರಗೊಂಡಿದ್ದು, ದಂಪತಿ ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಗ್ರಾಮದಲ್ಲಿ ನಡೆದಿದೆ.ವಿನಯ್ ಹಾಗೂ ನಂದಿನಿ ಗಂಭೀರ ಗಾಯಗೊಂಡವರು. ಶಾಂತರಾಜು ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಿನಯ್ ಹಾಗೂ ನಂದಿನಿ ವಾಸವಾಗಿದ್ದರು. ಬೆಳಗ್ಗಿನ ಜಾವ ಮನೆಯಲ್ಲಿ ಸ್ಫೋಟಗೊಂಡಿದ್ದು,  ಸ್ಫೋಟದ ತೀವ್ರತೆಗೆ ಮನೆ ಕುಸಿದುಬಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿವೆ.ಮನೆಯಲ್ಲಿದ್ದ ವಿನಯ್ ಹಾಗೂ ನಂದಿನಿಗೆ ಸುಟ್ಟು ಗಾಯಗಳಾಗಿವೆ. ವಿನಯ್ ತಲೆ ಮೇಲೆ ಕಲ್ಲು ಬಿದ್ದು ಗಂಭೀರ ಗಾಯವಾಗಿದೆ. ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ವಿದ್ಯುತ್ ಕಂಬವೂ ಹಾನಿಗೊಳಗಾಗಿದೆ. ಇದನ್ನೂ ಓದಿ: ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರುಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆಂಗಳೂರಿನಿಂದ ಎಫ್‍ಎಸ್‍ಎಲ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಮೇಲ್ನೋಟಕ್ಕೆ ಎಲ್‍ಪಿಜಿ ಸಿಲಿಂಡರ್ ಸೋರಿಕೆಯಾಗಿ ಸ್ಪೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಪ್ಪ-ಅಮ್ಮ ಬಳಿ ಸುಳ್ಳು ಹೇಳಿದ್ದೆವು- ಉಕ್ರೇನ್ ಅನುಭವ ಹಂಚಿಕೊಂಡ ವಿದ್ಯಾರ್ಥಿನಿSign in to your account
Username or Email Address


Password

 Remember Me


