ಮಡಿಕೇರಿ: ರಷ್ಯಾದ ಆಕ್ರಮಣಕಾರಿ ದಾಳಿಯಿಂದ ಉಕ್ರೇನ್ ದೇಶ ನಲುಗಿ ಹೋಗುತ್ತಿದೆ. ಇತ್ತ ಕರ್ನಾಟಕದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ವಿದ್ಯಾರ್ಥಿಗಳು ಈ ದಾಳಿಯಿಂದ ಮತ್ತೆ ದೇಶಕ್ಕೆ ಮರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಂತೆ ಕೊಡಗು ಜಿಲ್ಲೆಯ ಸುಮಾರು 10 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ಅವರನ್ನು ಕರೆತರುವ ಪ್ರಯತ್ನ ಜಿಲ್ಲಾಡಳಿತ ನಡೆಸುತ್ತಿದೆ.ಈ ಕುರಿತು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಪಬ್ಲಿಕ್ ಟಿವಿ ಗೆ ಸ್ಪಷ್ಟನೆ ನೀಡಿದ್ದಾರೆ. ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿದ ಅವರು, ಈಗಾಗಲೇ ಉಕ್ರೇನ್ ನಲ್ಲಿ ಜಿಲ್ಲೆಯ ಇಬ್ಬರು ಹುಡುಗರು, 8 ಹುಡುಗಿಯರು ಸಿಲುಕಿದ್ದಾರೆ. ಅವರೆಲ್ಲರು ಪೆÇೀಷಕರನ್ನು ಮತ್ತು ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲುಅಷ್ಟು ವಿದ್ಯಾರ್ಥಿಗಳನ್ನು ಭಾರತೀಯ ರಾಯಭಾರಿ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಎಲ್ಲರೂ ಬಂಕರ್‍ಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.ಕೊಡಗಿನ 10 ವಿದ್ಯಾರ್ಥಿಗಳು ಹೆಸರು ಈ ಕೆಳಗಿನಂತಿವೆ:
1)ಅಶ್ವಿನ್ ಕುಮಾರ್ – ಕೊಡಗು
2)ಚಂದನ್ ಗೌಡ – ಕುಶಾಲನಗರ
3)ಅಲಿಶಾ ಸೈಯದ್ – ಕೊಡಗು
4)ಲಿಖೀತ್ – ಕುಶಾಲನಗರ
5)ಅಕ್ಷಿತಾ ಅಕ್ಕಮ್ಮ – ಕುಶಾಲನಗರ
6)ಎಂ.ಪಿ.ನಿರ್ಮಲಾ – ಅಮ್ಮತ್ತಿ ವಿರಾಜಪೇಟೆ ತಾಲೂಕು
7)ಅರ್ಜುನ್ ವಸಂತ್- ಶಾನಿವಾರಸಂತೆ
8)ಸಿನಿಯಾ.ವಿ.ಜೆ – ಪೋನ್ನಂಪೇಟೆ
9)ತೇಜಸ್ವಿನಿ – ವಿರಾಜಪೇಟೆ
10)ಶೀತಲ್ – ಸಂಪತ್ – ಗೋಣಿಕೋಪ್ಪSign in to your account
Username or Email Address


Password

 Remember Me


