ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡು ಹಲವು ದಿನಗಳೆ ಕಳೆದಿದೆ. ಅವರ ಸಮಾಧಿ ವೀಕ್ಷಣೆಗೆ ಇನ್ನೂ ಸಾವಿರಾರು ಅಭಿಮಾನಿಗಳು, ಕಲಾವಿದರು ಬರುತ್ತಲೆ ಇದ್ದಾರೆ. ಇದೀಗ ಅಪ್ಪು ಸಮಾಧಿಗೆ ತಮಿಳು ನಟ  ದಳಪತಿ ವಿಜಯ್ ಭೇಟಿ ನಿಡಿದ್ದಾರೆ.ಅಪ್ಪು ಕುಟುಂಬ ಸದಸ್ಯರಿಗೆ ಹೇಳದೆ ಆಗಮಿಸಿದ ವಿಜಯ್ ಅವರು ಸಾಮಾನ್ಯ ಅಭಿಮಾನಿಯಂತೆ ಸಾಲಿನಲ್ಲಿ ಬಂದು ಅಪ್ಪು ಸ್ಮಾರಕ ದರ್ಶನ ಮಾಡಿದ್ದಾರೆ. ಯಾರಿಗೂ ಸಣ್ಣ ಸುಳಿವು ಕೊಡದಂತೆ ಬಂದು ಭೇಟಿ ನೀಡಿ  ನಮನ ಅರ್ಪಿಸಿದ್ದಾರೆ. ಇದನ್ನೂ ಓದಿ : ಮಹಾಶಿವರಾತ್ರಿಗೆ ಜೇಮ್ಸ್ ಸಿನಿಮಾ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಕೆಲವು ದಿನಗಳ ಹಿಂದೆ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಭೇಟಿಕೊಟ್ಟಿದ್ದರು. ಈ ವೇಳೆ ಶಿವರಾಜ್‍ಕುಮಾರ್, ಅಶ್ವಿನಿ ಪುನೀತ್‍ ರಾಜ್‍ಕುಮಾರ್ ಅವರ ನಿವಾಸಕ್ಕೆ ಭೇಟಿಕೊಟ್ಟು ಸಾಂತ್ವಾನ ಹೇಳಿದ್ದರು. ನನ್ನ ಹಾಗೂ ಪುನೀತ್ ನಡುವೆ ಮೊದಲಿನಿಂದಲೂ ಒಳ್ಳೆಯ ಬಾಂಧವ್ಯ ಇತ್ತು. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ಹೈದರಾಬಾದ್‍ಗೆ ಬಂದಾಗ ನನ್ನನ್ನು ಭೇಟಿ ಮಾಡುತ್ತಿದ್ದರು ಹೇಳುತ್ತಾ ಭಾವಕರಾಗಿದ್ದರು. ಇದನ್ನೂ ಓದಿ : ಪುನೀತ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ಹಾಡು ಮಾರ್ಚ್ 1ಕ್ಕೆ ಬಿಡುಗಡೆಗೆಯಾಗಲಿದೆ. ಈ ಸಿನಿಮಾದಿಂದ ರಿಲೀಸ್ ಆಗುತ್ತಿರುವ ಮೊದಲ ಹಾಡು ಇದಾಗಿದೆ. ಬೆಳಗ್ಗೆ 11.11ಕ್ಕೆ ಜೇಮ್ಸ್ ಟ್ರೇಡ್ ಮಾರ್ಕ್ ಹಾಡು ಬಿಡುಗಡೆಯಾಗಲಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ದಿನ ಸಿನಿಮಾ ತೆರೆ ಮೇಲೆ ಬರಲಿದೆ. ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಅಪ್ಪುನನ್ನು ನೋಡಲು ಅಭಿಮಾನಿಗಳು ಕಾತುರರಾಗಿರುವುದಂತು ಸತ್ಯ.Sign in to your account
Username or Email Address


Password

 Remember Me


