ಹಾಸನ: ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಈ ಷಡ್ಯಂತ್ರ ಎಷ್ಟು ದಿನದಿಂದ ನಡೆಯುತ್ತಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ (Dr Suraj Revanna) ಹೇಳಿದ್ದಾರೆ.ಹೊಳೆನರಸೀಪುರ ತಾಲೂಕಿನ ಗನ್ನಕಡ ಫಾರ್ಮ್‌ಹೌಸ್‌ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕಾರ ಮಾಡುತ್ತೇನೆ. ಕಾನೂನು ವ್ಯವಸ್ಥೆಯಲ್ಲಿ ಏನು ತೀರ್ಮಾನ ಆಗಬೇಕು ಆಗುತ್ತೆ. ಅವನ ಮೇಲೆಯೂ ಎಫ್‌ಐಆರ್ ಆಗಿದೆ ಎಂದರು.ಕಾನೂನಿನಲ್ಲಿ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಗೆ ಬರಲಿ. ಸತ್ಯ ಏನಿದೆ ಅದು ಹೊರಗೆ ಬಂದೇ ಬರುತ್ತೆ. ನಾಡಿನ ಕಾನೂನಿನ ಮೇಲೆ ನನಗೆ ವಿಶ್ವಾಸವಿದೆ. ಇದು ಸಂಪೂರ್ಣ ರಾಜಕೀಯ ಷಡ್ಯಂತ್ರ. ಅದರ ಬಗ್ಗೆ ನಾನು ಇಂದು ಏನೂ ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಾ.ಸೂರಜ್ ರೇವಣ್ಣ ವಿರುದ್ದ ಎಫ್ಐಆರ್ ದಾಖಲುಇಂತಹವರು, ಅಂತಹವರು, ಅವರು, ಇವರು ಮಾಡಿದ್ರು ಅಂತ ನಾನು ಚರ್ಚೆ ಮಾಡಲು ಹೋಗಲ್ಲ. ತನಿಖೆ ಪ್ರಗತಿಯಲ್ಲಿದೆ, ಸತ್ಯಾಸತ್ಯತೆ ಹೊರಗೆ ಬರುತ್ತೆ. ಇಡೀ ರಾಜ್ಯದ ಜನತೆ ಅದನ್ನು ನೋಡುತ್ತಾರೆ ಎಂದು ಸೂರಜ್‌ ರೇವಣ್ಣ ತಿಳಿಸಿದ್ದಾರೆ.Sign in to your account
Username or Email Address


Password

 Remember Me


