ವಿಜಯಪುರ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ (Renukaswamy Murder Case) ದರ್ಶನ್ (Darshan) ಜೈಲುಪಾಲಾದ ವಿಚಾರವಾಗಿ ಶಾಸಕ ಜಮೀರ್ ಅಹ್ಮದ್ (Zameer Ahmed Khan) ಪ್ರತಿಕ್ರಿಯಿಸಿದ್ದು, ದರ್ಶನ್ ಕೇಸಲ್ಲಿ ನನ್ನ ಪಾತ್ರ ಇಲ್ಲ. ನಾನು ಯಾರಿಗೂ ಒತ್ತಡ ಹಾಕಲು ಹೋಗಿಲ್ಲ ಎಂದಿದ್ದಾರೆ.ಈ ಕುರಿತು ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನಾನೇ ಒತ್ತಡ ಹಾಕಿದ್ದು ಎನ್ನುವ ರೀತಿಯಲ್ಲಿ ಸುದ್ದಿ ಬಂತು. ಯಾರು ಹೆಸರು ಹೇಳಿಲ್ಲ, ಪರೋಕ್ಷವಾಗಿ ನಾನೇ ಸಪೋರ್ಟ್ ಮಾಡಿದ್ದೆ ಎನ್ನುವ ಹಾಗೇ ಇತ್ತು. ನಾನು ದರ್ಶನ್ ಸ್ನೇಹಿತರು, ಇಲ್ಲ ಅಂತ ಅಲ್ಲ. ಆದರೆ ಈ ರೀತಿ ಮಾಡಿದಾಗ ಯಾರು ಸಪೋರ್ಟ್ ಮಾಡುತ್ತಾರೆ. ಅವರ ಜೊತೆ ಯಾರು ನಿಲ್ಲುತ್ತಾರೆ ಹೇಳಿ ಎಂದರು. ಇದನ್ನೂ ಓದಿ: ಡಾ.ಸೂರಜ್ ರೇವಣ್ಣ ವಿರುದ್ದ ಎಫ್ಐಆರ್ ದಾಖಲುಯಾರು ಮಾಡಿದರೂ ತಪ್ಪು ತಪ್ಪೇ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ದರ್ಶನ್ ಇರಲಿ, ಯಾರೇ ಇರಲಿ ಇದು ತಪ್ಪು. ಕಾನೂನು ಚೌಕಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ನ್ಯಾಯಾಲಯ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. ಇನ್ನು ಕಾಂಗ್ರೆಸ್ ಶಾಸಕ ಸಮರ್ಥನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅವರ ಅಭಿಪ್ರಾಯ. ನಾನು ನನ್ನ ಅಭಿಪ್ರಾಯ ಹೇಳಿದ್ದೀನಿ. ಅವರು ಅವರ ಅಭಿಪ್ರಾಯ ಹೇಳಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ವೆಬ್ ಆಪ್ ಬಳಸಿ ಮಾತನಾಡಿರೋ ಆರೋಪಿಗಳು- ರಿಮ್ಯಾಂಡ್ ಕಾಪಿಯಲ್ಲಿ ಸ್ಫೋಟಕ ಅಂಶ ಬಯಲು


 Advertisement 







 Advertisement 




Sign in to your account
Username or Email Address


Password

 Remember Me


