ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ 7,581 ಸಕ್ರಿಯ ಪ್ರಕರಣಗಳಿದ್ದು, ಇಂದು 628 ಪಾಸಿಟಿವ್ ಕೇಸ್‍ಗಳು ಹಾಗೂ 16 ಮರಣ ಪ್ರಕರಣಗಳು ದಾಖಲಾಗಿದೆ.ಇಂದು 1,349 ಕೋವಿಡ್ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಲ್ಲಿವರೆಗೆ 38,92,459 ರೋಗಿಗಳು ಗುಣಮುಖರಾಗಿದ್ದಾರೆ. ಇಂದಿನ ಪಾಸಿಟಿವಿಟ್ ರೇಟ್ ಶೇ.0.92 ಇದ್ದು, ಮೃತಪಟ್ಟವರ ಶೇಕಡಾವಾರು ಪ್ರಮಾಣ 2.38 ಇದೆ. ಇದನ್ನೂ ಓದಿ: Russia-Ukraine War: ಉಕ್ರೇನ್ ಜೊತೆ ಮಾತುಕತೆಗೆ ಒಪ್ಪಿದ ರಷ್ಯಾರಾಜ್ಯದಲ್ಲಿ ಇಂದು ಒಟ್ಟು 1,05,030 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 67,583 ಸ್ಯಾಂಪಲ್(ಆರ್‍ಟಿಪಿಸಿಆರ್ 50061 + 17,522 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: Russia-Ukraine Crisis: 4 ಬಸ್‍ಗಳಲ್ಲಿ 240 ವಿದ್ಯಾರ್ಥಿಗಳು ರೊಮೇನಿಯಾಗೆ ಶಿಫ್ಟ್ಆರೋಗ್ಯ ಇಲಾಖೆಯ ಪ್ರಕಾರ ಬಾಗಲಕೋಟೆ 1, ಬಳ್ಳಾರಿ 14, ಬೆಳಗಾವಿ 30, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 346, ಬೀದರ್ 2, ಚಾಮರಾಜನಗರ 11, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 6, ಚಿತ್ರದುರ್ಗ 22, ದಕ್ಷಿಣ ಕನ್ನಡ 14, ದಾವಣಗೆರೆ 7, ಧಾರವಾಡ 9, ಗದಗ 0, ಹಾಸನ 10, ಹಾವೇರಿ 4, ಕಲಬುರಗಿ 4, ಕೊಡಗು 21, ಕೋಲಾರ 6, ಕೊಪ್ಪಳ 5, ಮಂಡ್ಯ 15, ಮೈಸೂರು 21, ರಾಯಚೂರು 2, ರಾಮನಗರ 7, ಶಿವಮೊಗ್ಗ 13, ತುಮಕೂರು 15, ಉಡುಪಿ 17, ಉತ್ತರ ಕನ್ನಡ 11, ವಿಜಯಪುರ 9 ಹಾಗೂ ಯಾದಗಿರಿಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ.Sign in to your account
Username or Email Address


Password

 Remember Me


