ನಾಲ್ಕು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ಚೇತನ್ ಗೆ 32ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇಬ್ಬರ ಶ್ಯೂರಿಟಿ ಮತ್ತು ಒಂದು ಲಕ್ಷ ರೂಪಾಯಿ ಬಾಂಡ್ ಬರೆಯಿಸಿಕೊಂಡು ಜಾಮೀನು ನೀಡಲಾಗಿದೆ. ಮುಂದಿನ ಹಂತದ ತನಿಖೆಯಲ್ಲಿ ಸಹಕರಿಸುವಂತೆಯೂ ತಿಳಿಸಲಾಗಿದೆ. ಇದನ್ನೂ ಓದಿ : ವಿದ್ಯಾರ್ಥಿಗಳ ರಕ್ಷಣೆ ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆಚೇತನ್ ನ್ಯಾಯಾಧೀಶರ ಕುರಿತಾಗಿ ಮಾನಹಾನಿ ಮಾಡುವಂತಹ ಟ್ವಿಟ್ ಹಾಕಿದರು ಎನ್ನುವ ಕಾರಣಕ್ಕಾಗಿ ಶೇಷಾದ್ರಿಪುರಂ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ನಂತರ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವಿಧಿಸಿ ಕೋರ್ಟ್ ಆದೇಶಿಸಿತ್ತು. ನಾಲ್ಕು ದಿನಗಳಿಂದ ಚೇತನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು, ಜಾಮೀನಿಗಾಗಿ ಚೇತನ್ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಚೇತನ್ ಗೆ ಇದೀಗ ಜಾಮೀನು ಮಂಜೂರಾಗಿದೆ.Sign in to your account
Username or Email Address


Password

 Remember Me


