ಚಿಕ್ಕಬಳ್ಳಾಪುರ: ಕಾಲಿನ ಮಂಡಿಯಲ್ಲಿ ಒಂದೂವರೆ ಕೆಜಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿರುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ ಕಾಲಿನ ಮಂಡಿಯಲ್ಲಿ ಸರಿ ಸುಮಾರು ಒಂದೂವರೆ ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದನು. ಅದನ್ನು ತಿಳಿದ ಸಿಬ್ಬಂದಿ ಪ್ರಯಾಣಿಕನನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ: ಗೋವಿಂದ ಕಾರಜೋಳದುಬೈನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕ 75,54,530 ರೂಪಾಯಿ ಮೌಲ್ಯದ 1 ಕೆಜಿ 485 ಗ್ರಾಂ ಚಿನ್ನವನ್ನ ವಶಪಡಿಸಿಕೊಳ್ಳಾಗಿದೆ. ಮೊಣಕಾಲಿಗೆ ನೀ ಕ್ಯಾಪ್ ಹಾಕ್ಕೊಂಡು ಅದರಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಬಂದಿದ್ದಾನೆ. ಅದನ್ನು ಕಂಡು ಏರ್ಪೋಟ್ ನಲ್ಲಿ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಅದಕ್ಕೆ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ನೀ ಕ್ಯಾಪ್ ನಲ್ಲಿ ಚಿನ್ನ ಪತ್ತೆಯಾಗಿದೆ. ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮೊಣಕಾಲಿಗೆ ನೀ ಕ್ಯಾಪ್ ಹಾಕಿಕೊಂಡಿದ್ದು, ಸ್ಮಗ್ಲಿಂಗ್ ಮಾಡ್ತಿರುವುದು ತಿಳಿದುಬಂದಿದೆ. ಆರೋಪಿಯನ್ನ ವಶಕ್ಕೆ ಪಡೆದು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.Sign in to your account
Username or Email Address


Password

 Remember Me


