ದುನಿಯಾ ವಿಜಯ್ ಮತ್ತೊಂದು ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಎಂದು ಎರಡು ದಿನಗಳ ಹಿಂದೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಇದೀಗ ಸ್ವತಃ ವಿಜಯ್ ಅವರೇ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ, ಅಧಿಕೃತಗೊಳಿಸಿದ್ದಾರೆ. ತಮ್ಮ ಎರಡನೇ ಸಿನಿಮಾ ಕುರಿತು ಅತೀ ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿಸದ್ಯಕ್ಕೆ ‘ವಿಕೆ 28’ ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿರುವ ದುನಿಯಾ ವಿಜಯ್, ಈ ಸಿನಿಮಾ ಕೂಡ ರಕ್ತಸಿಕ್ತ ಅಧ್ಯಾಯವೊಂದನ್ನು ತೆರೆದಿಡಲಿದೆ ಎನ್ನುವಂತೆ ಪೋಸ್ಟರ್. ಲವ್ ಸ್ಟೋರಿಗಳಿಗಿಂತಲೂ ಲಾಂಗು ಮಚ್ಚುಗಳ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ದುನಿಯಾ ವಿಜಯ್, ಆ ಸರಣಿಯನ್ನು ಇಲ್ಲಿಯೂ ಮುಂದುವರೆಸಿದ್ದಾರೆ. ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿವಿಜಯ್ ಚೊಚ್ಚಲು ನಿರ್ದೇಶನದ ಸಲಗ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದರೂ, ನಿರ್ಮಾಪಕರ ಜೇಬು ತುಂಬಿಸುವಲ್ಲಿ ಸೋಲಲ್ಲಿ. ಹಾಗಾಗಿ ಈ ವರ್ಷದ ಗೆಲುವಿನ ಸಿನಿಮಾಗಳ ಪಟ್ಟಿಯಲ್ಲಿ ಅದು ಸ್ಥಾನ ಪಡೆದುಕೊಂಡಿತು. ಸಲಗ ಸಕ್ಸಸ್ ಆಗುತ್ತಿದ್ದಂತೆಯೇ ವಿಜಯ್ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿದರು. ಈಗದು ಎರಡನೇ ಸಿನಿಮಾವಾಗಿ ಬದಲಾಗಿದೆ. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್ಅಂದಹಾಗೆ ಸಲಗ ಸಿನಿಮಾ ಮಾಡಿದ್ದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಬದಲು ಈ ಸಿನಿಮಾವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಉಳಿದ ವಿವರವನ್ನು ಮುಂದಿನ ದಿನಗಳಲ್ಲಿ ನೀಡುತ್ತಾರಂತೆ ದುನಿಯಾ ವಿಜಯ್.Sign in to your account
Username or Email Address


Password

 Remember Me


