“ನನಗೆ ಬೆಂಗಳೂರು ತೀರಾ ಪರಿಚಿತ. ಅದರಲ್ಲೂ ಕೋರಮಂಗಲದ ಅನೇಕ ಬೀದಿಗಳನ್ನು ನಾನು ಸುತ್ತಾಡಿದ್ದೇನೆ. ಕೋರಮಂಗಲದ ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ್ದೇನೆ” ಎನ್ನುವ ಮೂಲಕ ಕರ್ನಾಟಕದ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ ಬಾಲಿವುಡ್ ನಟಿ ಹುಮಾ ಖುರೇಶಿ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟಸದ್ಯ ಅವರು ಅಜಿತ್ ನಟನೆಯ ತಮಿಳಿನ ‘ವಲಿಮೈ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಹುಮಾ, ತಮ್ಮ ಬೆಂಗಳೂರಿನ ನಂಟಿನ ಬಗ್ಗೆ ಸಾಕಷ್ಟು ಮಾತನಾಡಿದರು. ಕೋರಮಂಗಲದಲ್ಲಿ ಹುಮಾ ಸಂಬಂಧಿಕರ ವಾಸವಿದ್ದರಂತೆ. ಹಾಗಾಗಿ ಆಗಾಗ್ಗೆ ಅವರು ಬೆಂಗಳೂರಿಗೆ ಬರುತ್ತಿದ್ದರಂತೆ. ಒಂದು ರೀತಿಯಲ್ಲಿ ಕೋರಮಂಗಲ ಅವರ ನೆಚ್ಚಿನ ತಾಣವಾಗಿ ಉಳಿದುಬಿಡುವಷ್ಟು ಪರಿಚಿತವಂತೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..ಹುಮಾ ಖರೇಶಿಯ ಕನ್ನಡದ ನಂಟಿನ ಬಗ್ಗೆ ಮತ್ತೊಂದು ಸಂಗತಿಯಂದರೆ, ಕನ್ನಡಿಗ, ತಮಿಳಿನ ಖ್ಯಾತ ನಟ ರಜನಿಕಾಂತ್ ನಟನೆಯ ‘ಕಾಲಾ’ ಚಿತ್ರದಲ್ಲೂ ಹುಮಾ ನಟಿಸಿದ್ದರು.Sign in to your account
Username or Email Address


Password

 Remember Me


