ವಿವಾದಗಳಿಗೂ ಮತ್ತು ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೂ ಹಾಲು ತುಪ್ಪದ ಸಂಬಂಧ ಅನಿಸತ್ತೆ. ಅವರು ಆಯ್ಕೆ ಮಾಡಿಕೊಳ್ಳುವ ಪ್ರತಿ ಕಥೆಯೂ ವಿವಾದ ಕೇಂದ್ರಬಿಂದು ಆಗುತ್ತಿದೆ. ಈ ಹಿಂದೆ ತೆರೆಕಂಡ ಇವರ ನಿರ್ದೇಶನದ ‘ಪದ್ಮಾವತ್’ ಚಿತ್ರ ಕೂಡ ವಿವಾದದಿಂದಾಗಿಯೇ ಸಾಕಷ್ಟು ಸಂಚಲನ ಮೂಡಿಸಿತ್ತು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರಿಂದ ಹಿಡಿದು, ನಾನಾ ಸಂಘಟನೆಗಳು ಬನ್ಸಾಲಿ ವಿರುದ್ಧ ಪ್ರತಿಭಟಿಸಿದವು. ಕೋರ್ಟು, ಕಚೇರಿ ಅಂತ ಪದ್ಮಾವತಿ ಅಲೆದು ಅಲೆದು, ನಂತರ ಬಿಡುಗಡೆ ಆಯಿತು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಟಿ ಲಲಿತಾ ಇನ್ನಿಲ್ಲಇದೀಗ ಗಂಗೂಬಾಯಿ ಕಾಠಿಯಾವಾಡಿ ಸರದಿ. ಈ ಸಿನಿಮಾ ಇನ್ನೇನು ಎರಡೇ ಎರಡು ದಿನಗಳಲ್ಲಿ ಬಿಡುಗಡೆಯಾಗಬೇಕು. ಅಷ್ಟರಲ್ಲಿ ಮೂರು ಕೇಸ್ ಗಳು ಈ ಸಿನಿಮಾದ ವಿರುದ್ಧ ದಾಖಲಾಗಿವೆ. ಗಂಗೂಬಾಯಿ ದತ್ತು ಪುತ್ರ ಎಂದು ಹೇಳಿಕೊಳ್ಳುತ್ತಿರುವ ಬಾಬು ರಾವ್ ಷಾ ಎನ್ನುವವರು ಈ ಮೊದಲು ಸಂಜಯ್ ಲೀಲಾ ಬನ್ಸಾಲಿ ಮತ್ತು ಗಂಗೂಬಾಯಿ ಪಾತ್ರ ಮಾಡಿರುವ ಅಲಿಯಾ ಭಟ್ ವಿರುದ್ಧ ಮಾನಹಾನಿ ದೂರ ದಾಖಲಿಸಿದ್ದರು. ತಮ್ಮ ಸಾಕು ತಾಯಿಯನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎನ್ನುವುದು ಅವರ ದೂರಾಗಿತ್ತು. ಕೇಸ್ ಇನ್ನೂ ನ್ಯಾಯಾಲಯದಲ್ಲಿ ಇದೆ. ಈಗ ಈ ಸಿನಿಮಾದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.  ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ವಿರುದ್ಧ ಇದೀಗ ಮಹಾರಾಷ್ಟ್ರದ ಶಾಸಕ ಅಮೀನ್ ಪಟೇಲ್ ಕೂಡ ಮತ್ತೊಂದು ದೂರು ಕೊಟ್ಟಿದ್ದಾರೆ. ಕಾಠಿಯಾವಾಡಿ ಎನ್ನುವುದು ಪ್ರದೇಶದ ಹೆಸರು. ಈ ಹೆಸರನ್ನು ಚಿತ್ರದಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


