ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಏಪ್ರಿಲ್ 14 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಮಾಡುವುದಾಗಿ ಹೊಂಬಾಳೆ ನಿರ್ಮಾಣ ಸಂಸ್ಥೆ ಈಗಾಗಲೇ ದಿನಾಂಕ ಗೊತ್ತು ಮಾಡಿದೆ. ಈ ನಡುವೆ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಕೆಜಿಎಫ್ 2 ಇಂಗ್ಲಿಷ್ ನಲ್ಲೂ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಂದುಕೊಂಡಂತೆ ಆದರೆ, ರಾಕಿಭಾಯ್ ಹಾಲಿವುಡ್ ನಲ್ಲೂ ಹವಾ ಕ್ರಿಯೇಟ್ ಮಾಡಲಿದ್ದಾರೆ. ಇದನ್ನೂ ಓದಿ : ‘ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..ಸದ್ಯ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ‘ಕೆಜಿಎಫ್ 2’ ರಿಲೀಸ್ ಆಗಲಿದೆ ಎಂದು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದರು. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲೂ ಇಷ್ಟೂ ಭಾಷೆಗಳ ಹೆಸರನ್ನು ಹಾಕಲಾಗಿತ್ತು. ಆಯಾ ಭಾಷೆಯ ಪೋಸ್ಟರ್ ಮತ್ತು ಹಾಡುಗಳನ್ನೂ ಚಿತ್ರತಂಡ ಬಿಡುಗಡೆ ಮಾಡಿತ್ತು. ಇದೀಗ ಇಂಗ್ಲಿಷ್ ನಲ್ಲೂ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರಂತೆ ನಿರ್ಮಾಪಕರು. ಇದನ್ನೂ ಓದಿ : ನಾನು ಜ್ಯೂನಿಯರ್ ಪುನೀತ್ ರಾಜ್ ಕುಮಾರ್ ಅಲ್ಲ : ಮಾರಕಾಸ್ತ್ರ ಹೀರೋ ಹೇಳಿಕೆಇದೊಂದು ಪ್ಯಾನ್ ಇಂಡಿಯಾ ಮಾದರಿಯ ಚಿತ್ರವಾಗಿದ್ದರಿಂದ ಮತ್ತು ಕೇವಲ ಭಾಷೆ ಬದಲಾವಣೆ ಮಾತ್ರ ಆಗಬೇಕಾಗಿದ್ದರಿಂದ ಇಂಗ್ಲಿಷ್ ನಲ್ಲೂ ಈ ಸಿನಿಮಾ ಬಂದರೆ ಅಚ್ಚರಿ ಪಡಬೇಕಿಲ್ಲ. ಕೆಜಿಎಫ್ 1 ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲ, ಬೇರೆ ಬೇರೆ ದೇಶಗಳಲ್ಲಿ ರಿಲೀಸ್ ಆಗಿದ್ದರಿಂದ ಮತ್ತು ಅಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ದೊರೆತದ್ದರಿಂದ ಚಿತ್ರತಂಡಕ್ಕೆ ಇಂಥದ್ದೊಂದು ಯೋಚನೆ ಬಂದಿರಲಿಕ್ಕೆ ಸಾಕು. ಇದನ್ನೂ ಓದಿ : ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಜತೆ ಬಾಲಿವುಡ್ ತಾರೆಯರಾದ ಸಂಜಯ್ ದತ್ತ, ರವಿನಾ ಟಂಡನ್ ಮತ್ತು ಪ್ರಕಾಶ್ ರೈ ಅಂತಹ ಖ್ಯಾತ ಕಲಾವಿದರು ಇದ್ದಾರೆ. ಇವರೆಲ್ಲರ ಸಿನಿಮಾಗಳನ್ನು ಜಗತ್ತಿನ ಪ್ರೇಕ್ಷಕರು ಈಗಾಗಲೇ ನೋಡಿದ್ದಾರೆ. ಹಾಗಾಗಿ ಕೆಜಿಎಫ್ 2 ಇಂಗ್ಲಿಷ್ ನಲ್ಲೂ ಗೆಲ್ಲುವುದರಲ್ಲಿ ಅನುಮಾನವಿಲ್ಲ.Sign in to your account
Username or Email Address


Password

 Remember Me


