ಆರೋಗ್ಯದ ಬಗ್ಗೆ ಸದಾ ಕಾಳಜಿ ತಗೆದುಕೊಳ್ಳುತ್ತಿದ್ದ ಆರ್.ಜೆ ರಚನಾ ಸಾವಿಗೆ ಫಿಟ್ನೆಸ್ ಮಂತ್ರವೇ ಮುಳುವಾಯಿತೆ? ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ರಚನಾ ಅವರು ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸಿದ್ದರು. ಬೆಳಗ್ಗೆ ಮತ್ತು ಸಂಜೆ ಜಿಮ್, ವಾಕಿಂಗ್, ಸೈಕ್ಲಿಂಗ್ ಹಾಗೂ ಹಸಿ ತರಕಾರಿ ಸೇವನೆ ಸೇರಿದಂತೆ ಫಿಟ್ನೆಸ್ ಗೆ ಸಂಬಂಧಿಸಿದಂತೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರಂತೆ ಕಾರ್ಡಿಯಾಕ್ ಅರೆಸ್ಟ್ ಗೆ ಅದೇ ಕಾರಣ ಆಯಿತೆ ಎನ್ನುವ ಆತಂಕ ಶುರುವಾಗಿದೆ. ಇದನ್ನೂ ಓದಿ : ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾಈ ಹಿಂದೆ ಪುನೀತ್ ರಾಜ್ ಕುಮಾರ್ ನಿಧನದ ನಂತರವೂ ಇಂಥದ್ದೊಂದು ಚರ್ಚೆ ಜೋರಾಗಿತ್ತು. ಅತಿಯಾದ ಆರೋಗ್ಯ ಕಾಳಜಿಯೇ ಅವರ ಸಾವಿಗೆ ಕಾರಣವಾಯಿತು ಎನ್ನುವ ಮಾತೂ ಕೇಳಿ ಬಂತು. ಸಾವಿಗೂ ಮತ್ತು ಜಿಮ್ ಗೂ ಯಾವುದೇ ಸಂಬಂಧವಿಲ್ಲ ಎಂದು ಜಿಮ್ ತರಬೇತುದಾರರು ಹೇಳಬೇಕಾಯಿತು. ಆದರೂ, ಆತಂಕ ಮಾತ್ರ ಇನ್ನೂ ನಿಂತಿಲ್ಲ.  ಇದನ್ನೂ ಓದಿ : ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರುಪುನೀತ್ ಅವರಿಗೂ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ರಚನಾ ಅವರಿಗೂ ಅದೇ ಆಗಿದೆ. ಇಬ್ಬರೂ ಕೂಡ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ತಗೆದುಕೊಂಡಿದ್ದರು. ಹೀಗಾಗಿ ಸಹಜವಾಗಿ ಹೋಲಿಕೆ ಶುರುವಾಗಿದೆ.Sign in to your account
Username or Email Address


Password

 Remember Me


