ಬೆಂಗಳೂರು: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ರಾಜ್ಯಾದ್ಯಂತ ಬಿಸಿ ಕೆಂಡವಾಗಿದೆ. ತಮ್ಮನನ್ನು ಕಳೆದುಕೊಂಡ ಹರ್ಷನ ಅಕ್ಕ ಮಾಧ್ಯಮಗಳ ಮುಂದೆ ಕರುಳು ಹಿಂಡುವಂತಹ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟಿ ರಮ್ಯಾ ತಮ್ಮ ಟಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.ಹಿಂದೂ ಎನ್ನುವುದು ಬಿಟ್ಟರೆ ನನ್ನ ತಮ್ಮ ಬೇರೆ ಏನೂ ಮಾಡಿಲ್ಲ. ಹಿಂದೂ-ಹಿಂದುತ್ವ ಎಂದಿದ್ದಕ್ಕೆ ಇಂದು ನನ್ನ ತಮ್ಮ ಈ ಸ್ಥಿತಿಗೆ ಬಂದುಬಿಟ್ಟ. ಹಿಂದೂ ಮುಸ್ಲಿಂ ಎಲ್ಲಾ ಸಮುದಾಯದ ಅಣ್ಣ ತಮ್ಮಂದಿರಿಗೆ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ ನೀವು ನಿಮ್ಮ ತಂದೆ ತಾಯಿಯರಿಗೆ ಒಳ್ಳೆಯ ಮಕ್ಕಳಾಗಿರಿ. ಅದು ಬಿಟ್ಟು ಈ ರೀತಿ ಮಾಡಬೇಡಿ ಎಂದು ಹರ್ಷನ ಸಹೋದರಿ ಅಶ್ವಿನಿ ಕಂಬನಿ ಹಾಕಿದ್ದರು. ಇದನ್ನೂ ಓದಿ: ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?Harsha’s sister is right. How many more lives will we lose to divisive politics? Unity, peace and harmony is the way forward. My heart goes out to her and her family. https://t.co/AglGmkCYFJ— Divya Spandana/Ramya (@divyaspandana) February 22, 2022ಹರ್ಷನ ಹೇಳಿಕೆಗೆ ರಮ್ಯಾ, ಆಕೆ ಹೇಳಿದ್ದು ಸರಿ. ಒಡೆದು ಆಳುವ ರಾಜಕಾರಣಕ್ಕೆ ನಾವು ಇನ್ನು ಎಷ್ಟು ಜೀವಗಳನ್ನು ಕಳೆದುಕೊಳ್ಳಬೇಕು? ಇದನ್ನು ಏಕತೆ, ಶಾಂತಿ ಹಾಗೂ ಸೌಹಾರ್ದತೆ ಎನ್ನುತ್ತಾರಾ? ನನ್ನ ಹೃದಯ ಅವಳ ಹಾಗೂ ಹರ್ಷ ಕುಟುಂಬಕ್ಕೆ ಮರುಗುತ್ತಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 9 ಎಫ್‍ಐಆರ್, 7 ಮಂದಿ ಅರೆಸ್ಟ್‌ – ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆSign in to your account
Username or Email Address


Password

 Remember Me


