ಶಿವರಾಜ್ ಕುಮಾರ್ ನಟನೆ ‘ಶಿವಲಿಂಗ’ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಗ್ಲಾಮರ್ ಗೊಂಬೆ ವೇದಿಕಾ ಮತ್ತೆ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದ್ದಾರೆ. ಈ ಬಾರಿ ಅವರು ಪ್ರ‍ಜ್ವಲ್ ದೇವರಾಜ್ ನಟನೆಯ ‘ಗಣ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈವರೆಗೂ ಗ್ಲಾಮರೆಸ್ ಪಾತ್ರದಲ್ಲಿಯೇ ಕಾಣಿಸಿಕೊಂಡಿರುವ ವೇದಿಕಾ ಈ ಸಿನಿಮಾದಲ್ಲಿ ಯಾವ ಬಗೆಯ ಪಾತ್ರ ಮಾಡಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು. ಇದನ್ನೂ ಓದಿ : ಮೊಗ್ಗಿನ ಮನಸು ಚಿತ್ರಕ್ಕೂ ಲವ್ 360 ಸಿನಿಮಾಗೂ ಇರೋ ಸಂಬಂಧ ಏನು?ಗಣೇಶ್ ನಟನೆಯ ಸಂಗಮ ವೇದಿಕಾ ಅವರ ಮೊದಲ ಸಿನಿಮಾ. 2008ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ಇವರು ಲಕ್ಷ್ಮೀ ಹೆಸರಿನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ವೇದಿಕಾ ಮತ್ತು ಗಣೇಶ್ ಕಾಂಬಿನೇಷನ್ ಅನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದರು. ಈ ಹಿಂದೆ ಅವರು ಎರಡು ತಮಿಳು ಮತ್ತು ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದರೂ, ಕನ್ನಡದ ಸಂಗಮ ಸಿನಿಮಾ ಅವರಿಗೊಂದು ಬ್ರೇಕ್ ನೀಡಿತ್ತು. ಇದನ್ನೂ ಓದಿ : ನಾಗಿಣಿ 2 ಧಾರಾವಾಹಿಗೆ ಬಂದ ತಿಥಿ ಖ್ಯಾತಿಯ ಸೆಂಚ್ಯುರಿ ಗೌಡ, ಗಡ್ಡಪ್ಪಸಂಗಮ ನಂತರ ಮತ್ತೆ ವೇದಿಕಾ ಕನ್ನಡಕ್ಕೆ ಬಂದಿದ್ದು ಶಿವರಾಜ್ ಕುಮಾರ್ ನಟನೆಯ ‘ಶಿವಲಿಂಗ’ ಚಿತ್ರಕ್ಕೆ. ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿದ್ದರಿಂದ ವೇದಿಕಾಗೂ ಕೂಡ ಒಳ್ಳೆಯ ಹೆಸರು ಬಂತು. ಅಲ್ಲಿಂದ ಅವರು ಮತ್ತೆ ಕನ್ನಡದಲ್ಲಿ ಎರಡು ಚಿತ್ರಕ್ಕೆ ಸಹಿ ಮಾಡಿದರು. ಶಿವಲಿಂಗ ನಂತರ ಗೌಡ್ರ ಹೋಟೆಲ್ ಮತ್ತು ಹೋಂ ಮಿನಿಸ್ಟರ್ ಚಿತ್ರಗಳು ಬಂದವು. ಇದೀಗ ಗಣ ಅವರ ಐದನೇ ಚಿತ್ರವಾಗಿದೆ. ಇದನ್ನೂ ಓದಿ : ಪುನೀತ್ ಅವರ ದ್ವಿತ್ವ ಸಿನಿಮಾದ ಮೇಲೆ ಹಲವರ ಕಣ್ಣುಗಣ ಸಿನಿಮಾದಲ್ಲಿ ಅವರದ್ದು ಸವಾಲಿನ ಪಾತ್ರವಾಗಿದೆಯಂತೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ನಟನೆಗೆ ಅವಕಾಶ ಇರುವಂತಹ ಪಾತ್ರ ಕೊಟ್ಟಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ : ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶಹರಿಪ್ರಸಾದ್ ಜಕ್ಕ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಸಂಪತ್ ಕುಮಾರ್, ರವಿ ಕಾಳೆ, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.Sign in to your account
Username or Email Address


Password

 Remember Me


