ಬೀದರ್: ಎಕ್ಸ್ ಪೈರ್ ಆದ ಡ್ರೈಫ್ರೂಟ್ಸ್ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಾಪರಿಗಳಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡ ಘಟನೆ ನಗರದ ಶಿವನಗರದ ಪಾಪನಾಶ ಗೇಟ್ ಬಳಿ ನಡೆದಿದೆ.ಮಹಾರಾಷ್ಟ್ರ ಮೂಲದ ವ್ಯಾಪಾರಿಗಳು ಕಳಪೆ ಗುಣಮಟ್ಟದ ಹಾಗೂ ದಿನಾಂಕ ಮುಗಿದಿರುವ ಡ್ರೈಫ್ರೂಟ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಪಾಪನಾಶ ಗೇಟ್ ನಿಂದ ನೌಬಾದ್ ವರೆಗೆ 10ಕ್ಕೂ ಹೆಚ್ಚು ರಸ್ತೆ ಬದಿಯ ಅಂಗಡಿಗಳನ್ನು ಹಾಕಿಕೊಂಡು ಎಕ್ಸ್ ಪೈರ್ ಆಗಿರುವ ಡ್ರೈಫ್ರೂಟ್ಸ್ ಗಳನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ:  ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್ಡ್ರೈಫ್ರೂಟ್ಸ್ ಕೊಂಡುಕೊಳ್ಳಲು ಬಂದಾಗ ಸಾರ್ವಜನಿಕರು ದಿನಾಂಕ ಪರಿಶೀಲನೆ ಮಾಡಿ ವ್ಯಾಪಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ತರಾಟೆ ತೆಗೆದುಕೊಳ್ಳುತ್ತಿದ್ದಂತ್ತೆ ಎಕ್ಸ್ ಪೈರ್ ಆಗಿರುವ ಡ್ರೈಫ್ರೂಟ್ಸ್ ತುಂಬಿಕೊಂಡು ಅಂಗಡಿಗಳನ್ನು ಮುಚ್ಚಿಕೊಂಡು ಮಹಾರಾಷ್ಟ್ರ ಮೂಲದ ವ್ಯಾಪಾರಿಗಳು ಪರಾರಿಯಾಗಿದ್ದಾರೆ. Sign in to your account
Username or Email Address


Password

 Remember Me


