ಬೆಂಗಳೂರು: ರಾಷ್ಟ್ರಧ್ವಜ, ತ್ರಿವರ್ಣಧ್ವಜ ಅದರಲ್ಲಿ ಎರಡು ಮಾತಿಲ್ಲ. ಭಗವಧ್ವಜ ಪರಂಪರೆ ಇಂದ ಬಂದಿದ್ದು, ನಮ್ಮ ಹೃದಯದಲ್ಲಿ ಇದೆ. ಆದರೆ ಕಾಂಗ್ರೆಸ್ ನವರ ಹೋರಾಟ ಬೂಟಾಟಿಕೆಯಾಗಿದೆ ಎಂದು ವಿರೋಧ ಪಕ್ಷದ ನಿಲುವಿನ ಕುರಿತಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿಧಾನಸೌದಲ್ಲಿ ಮಾತನಾಡಿದ ಅವರು, ಧ್ವಜ ಹಿಡಿದು ಹೋದವರನ್ನ ಕೊಂದವರು ಕಾಂಗ್ರೆಸ್‍ನವರು. ಈಗ ಕಾಂಗ್ರೆಸ್ ನಾಯಕರು ಮಾತಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ನನ್ನ ಹೇಳಿಕೆಗೆ ನಾನು ಬದ್ದವಾಗಿದ್ದೇನೆ. ಪಿಎಫ್‍ಐ, ಎಸ್‍ಡಿಪಿಐ ನಿಷೇಧ ವಿಚಾರ ಮುಖ್ಯ ಮಂತ್ರಿಗಳು, ಗೃಹ ಸಚಿವರನ್ನ ಕೇಳಬೇಕು ಎಂದಿದ್ದಾರೆ. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿಹರ್ಷ ಹತ್ಯೆ ಮಾಡಿದವರು ಒಂದು ಕೋಮಿಗೆ ಸೇರಿದವರು. ಹತ್ಯೆ ಮಾಡಬೇಕೆಂದು ಯೋಜನಾಬಧ್ಧವಾಗಿ ಮಾಡಿದ್ದಾರೆ. ಬೆಂಗಳೂರಿನಿಂದ ಕರೆಸಿಕೊಂಡಿದ್ದಾರೆ. ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ, ರಾಜ್ಯದ ಜನರಿಗೆ ರಕ್ಷಣೆ ಕೊಡೋದು ನಮ್ಮ ಕರ್ತವ್ಯವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲೂ ಸಾಲು ಕೊಲೆ ಸಾವುಗಳು ಸಂಭವಿಸಿದೆ. ನನಗೂ ಭಾವನೆಗಳಿವೆ ಹಾಗಂತ ಸರ್ಕಾರ ಭಾವನೆಗಳ ಆಧಾರದ ಮೇಲೆ ನಡೆಯಲ್ಲ, ಕಾನೂನಿನಂತೆ ನಡೆಯುತ್ತದೆ. ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಆಯ್ತು, ಕಾಂಗ್ರೆಸ್ ನವರು ಏನ್ಮಾಡಿದ್ರು? ಎಂದು ಪ್ರಶ್ನೆ ಮಾಡಿದ್ದಾರೆ.Sign in to your account
Username or Email Address


Password

 Remember Me


