ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಯನ್ನು ಕೊಂದಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ದುರ್ದೈವಿಯನ್ನು ಸಾವಿತ್ರಿ ಹಾಗೂ ಸರೋಜಮ್ಮ ಎಂದು ಗುರುತಿಸಲಾಗಿದ್ದು, ರವಿಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ರವಿಕುಮಾರ್, ಪದೇ ಪದೇ ಹೆಂಡತಿಗೆ ಬುದ್ಧಿವಾದ ಹೇಳಿದ್ದನು. ಆದರೂ ಹೆಂಡತಿ ತನ್ನ ಛಾಳಿಯನ್ನು ತಿದ್ದುಕೊಳ್ಳದ ಹಿನ್ನೆಲೆ ಮೊದಲು ವಾಸ ಮಾಡುತ್ತಿದ್ದ ಮನೆಯನ್ನು ಖಾಲಿ ಮಾಡಿ ಬೇರೆ ಕಡೆ ಮನೆ ಮಾಡಿದನು. ಬಳಿಕವೂ ಹೆಂಡತಿ ತನ್ನ ಹಳೇ ಗೆಳಯನನ್ನು ಬಿಟ್ಟಿರಲಿಲ್ಲ. ಇದರಿಂದ ಬೇಸತ್ತ ರವಿಕುಮಾರ್ ಇಂದು ಮಕ್ಕಳನ್ನು ಸ್ವತಃ ತಾನೇ ಸ್ಕೂಲ್‍ಗೆ ಬಿಟ್ಟಿದ್ದಾನೆ. ಇದನ್ನೂ ಓದಿ:  ಉಗ್ರರ ಪತ್ತೆಗೆ ಗಾಜಿಯಾಬಾದ್ ಕವಿಯನ್ನು ನೇಮಿಸಿಕೊಳ್ಳಿ: ಕೇಜ್ರಿವಾಲ್ ವ್ಯಂಗ್ಯನಂತರ ಸ್ಕೂಲಿನಿಂದ ಮನೆಗೆ ಬಂದು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಎಳ ನೀರು ಕೊಚ್ಚುವ ಮಚ್ಚಿನಿಂದ ಪತ್ನಿ ಸಾವಿತ್ರಿ ಮತ್ತು ಆಕೆಯ ತಾಯಿ ಸರೋಜಮ್ಮ ಇಬ್ಬರನ್ನೂ ಕೊಚ್ಚಿ ಕೊಂದಿದ್ದಾನೆ. ಕೊಲೆ ಮಾಡಿ ತಕ್ಷಣ ತಾನೇ ತನ್ನ ಸ್ಕೂಟರ್ ಮೂಲಕ ಪೊಲೀಸ್ ಠಾಣೆಗೆ ತೆರಳಿ ಹೆಂಡತಿಯನ್ನು ಹತ್ಯೆ ಮಾಡಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ:  ಉಗ್ರರ ಪತ್ತೆಗೆ ಗಾಜಿಯಾಬಾದ್ ಕವಿಯನ್ನು ನೇಮಿಸಿಕೊಳ್ಳಿ: ಕೇಜ್ರಿವಾಲ್ ವ್ಯಂಗ್ಯ 






 Advertisement 




Sign in to your account
Username or Email Address


Password

 Remember Me


