ಕಾರವಾರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿದ್ದಾರೆ. ಈ ಸಮಾಜಮುಖಿ ಕಾರ್ಯದಿಂದ ಅಭಿಮಾನಿಗಳು ಅವರ ಹಾದಿಯಲ್ಲೇ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾದರಿಯಾಗುತ್ತಿದ್ದಾರೆ. ಇದೀಗ ನವದಂಪತಿ ಪುನೀತ್ ಹೆಸರಿನಲ್ಲಿ ನೇತ್ರ ದಾನ ಮಾಡಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಮಂಜಗುಣಿ ಗ್ರಾಮದಲ್ಲಿ ಪುನೀತ್ ಅಭಿಮಾನಿಗಳು ಅವರ ಪುತ್ಥಳಿ ನಿರ್ಮಿಸಿದ್ದು, 50ಕ್ಕೂ ಅಧಿಕ ಜನರು ನೇತ್ರದಾನ ಮಾಡಿದ್ದಾರೆ. ಅಭಿಮಾನಿಗಳಿಂದ ನಿರ್ಮಿಸಲಾಗಿರುವ ಪುತ್ಥಳಿಗೆ ನವದಂಪತಿ ಮಣಿಕಂಠ ನಾಯ್ಕ ಹಾಗೂ ಸಿಂಧು ಮಾಲಾರ್ಪಣೆ ಮಾಡಿ ನೇತ್ರದಾನ ಮಾಡಿದ್ದಾರೆ. ಇದನ್ನೂ ಓದಿ: UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!ಭಟ್ಕಳದಲ್ಲಿ ವಿವಾಹವಾಗಿದ್ದ ನವದಂಪತಿಗೆ ಪುನೀತ್ ಎಂದರೆ ಪಂಚಪ್ರಾಣ. ಹೀಗಾಗಿ ತಾವು ಹೊಸ ಜೀವನಕ್ಕೆ ಕಾಲಿಡುವಾಗ ಪುನೀತ್‍ರಂತೆ ಕಾರ್ಯ ಮಾಡಬೇಕು ಎಂಬ ಹಂಬಲದಿಂದ ನೇತ್ರದಾನ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾSign in to your account
Username or Email Address


Password

 Remember Me


