ಬೆಂಗಳೂರು: ರಾಜ್ಯದಲ್ಲಿ ಇಂದು ಸಾವಿರ ಸಂಖ್ಯೆಗಿಂತ ಕಡಿಮೆ ಪ್ರಕರಣಗಳು ದಾಖಲಾಗಿದ್ದು, 21 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.ರಾಜ್ಯದಲ್ಲಿ ಇಂದು 679 ಹೊಸ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ 346 ಹೊಸ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು 1.29% ಪಾಸಿಟಿವಿಟಿ ರೇಟ್ ಕಾಣಿಸಿಕೊಂಡಿದೆ.ರಾಜ್ಯದಲ್ಲಿ ಇಂದು ಒಟ್ಟು 1,932 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 11,360 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 5.6 ಸಾವಿರ ಜನರು ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!Daily new cases in Bengaluru fall to pre-third wave levels today: ◾New cases in State: 679◾New cases in B'lore: 346◾Positivity rate in State: 1.29%◾Discharges: 1,932◾Active cases: State- 11,360; B'lore- 5.6k◾Deaths:21 (B'lore- 8)◾Tests: 52,505#COVID19— Dr Sudhakar K (@mla_sudhakar) February 21, 2022ಒಟ್ಟು ರಾಜ್ಯದಲ್ಲಿ 21 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ 8 ಜನರು ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ 52,505 ಜನರು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಕಡಿಮೆಯಾಗುತ್ತಿದ್ದು, ರಾಜ್ಯದಲ್ಲಿ ಮತ್ತೆ ಹಳೆಯ ಜೀವನ ಮರಳಬಹುದೆಂಬ ಭರವಸೆ ಜನರಲ್ಲಿ ಮೂಡಿದೆ.






 Advertisement 




Sign in to your account
Username or Email Address


Password

 Remember Me


