ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಗೆ ತನ್ನ ತಾಯಿಯೇ ಕಿಡ್ನಿದಾನ ಮಾಡಿದ್ದಾರೆ.ತಾಯಿಯೇ ಮಗಳಿಗೆ ಕಿಡ್ನಿದಾನ ಮಾಡಿದ ಮೇಲೆ ಕಿಡ್ನಿಕಸಿ ಯಶಸ್ವಿಯಾಗಿ ಮಾಡಲಾಗಿದೆ. ಈ ಸುದ್ದಿಯಲ್ಲಿ ಮತ್ತೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ರೋಬೋ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಕಿಡ್ನಿ ಕಸಿಯನ್ನು ಮಾಡಲಾಗಿದೆ. ಇದನ್ನಿ ಫೊರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.ಈ ಕುರಿತು ಮಾತನಾಡಿದ ರೋಬೋಟಿಕ್ ಸರ್ಜರಿ ಮತ್ತು ಕಸಿ ವಿಭಾಗದ ನಿರ್ದೇಶಕ ಡಾ. ಮೋಹನ್ ಕೇಶವ ಮೂರ್ತಿ, ಕಳೆದ ಒಂದು ವರ್ಷದಿಂದ ಈ ಬಾಲಕಿಯು ಕಿಡ್ನಿಯನ್ನು ವೈಫಲ್ಯ ಮಾಡುವ ಲುಫುಸ್ ನೆಫ್ರಿಟಿಸ್ ರೋಗದಿಂದ ಬಳಲುತ್ತಿದ್ದಳು. ಡಯಾಲಿಸಿಸ್ ಮಾಡಲಾಗುತ್ತಿತ್ತು. ಬಾಲಕಿಯ ಆರೋಗ್ಯ ಕ್ಷೀಣಿಸುತ್ತಾ ಬಂದಿತು. ಬೇಗ ಕಿಡ್ನಿ ಕಸಿ ಮಾಡದಿದ್ದರೆ ಬಾಲಕಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿತ್ತು ಎಂದು ವಿವರಿಸಿದರು.ಕಿಡ್ನಿದಾನಿಗಳ ಕೊರತೆಯಿಂದ ಇದೂ ಸಹ ತಡವಾಗುತ್ತಿತ್ತು. ಈ ಸಂದರ್ಭದಲ್ಲಿ ಬಾಲಕಿಯ ತಾಯಿಯೇ ಕಿಡ್ನಿದಾನ ಮಾಡಲು ಮುಂದಾದರು. ಈ ವೇಳೆ ಕಾರ್ಯಪ್ರವೃತ್ತರಾದ ನಮ್ಮ ತಂಡ ಕಸಿ ನಡೆಸಲು ಮುಂದಾದೆವು. ಇದೇ ಮೊದಲ ಬಾರಿಗೆ ಫೊರ್ಟಿಸ್ ಆಸ್ಪತ್ರೆ ನೆಟ್‍ವರ್ಕ್‍ನಲ್ಲಿ ರೋಬೋಟ್ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಕಸಿ ಮಾಡಲಾಯಿತು ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಳ್ಳಾಟಕ್ಕೆ ರೋಸಿ ಹೋದ ರೈತರುಈ ಚಿಕಿತ್ಸಾ ವಿಧಾನವು ರೋಬೋಟಿಕ್‍ನಿಂದ ಕೂಡಿರುವುದರಿಂದ ಹೈ ಟೆಕ್ನಾಲಜಿಯನ್ನು ಬಳಸಲಾಗಿದೆ. ಕಸಿ ಸಂದರ್ಭದಲ್ಲಾಗಲಿ ಅಥವಾ ನಂತರದಲ್ಲಿ ಆಗುವ ನೋವನ್ನು ಕಡಿಮೆಗೊಳಿಸುತ್ತದೆ. ಚಿಕಿತ್ಸೆ ಬಳಿಕ ಬಾಲಕಿ ಸಂಪೂರ್ಣ ಗುಣಮುಖರಾಗಿದ್ದಾರೆ. ಕಳೆದ ಒಂದು ವರ್ಷದಿಂದ ವೀಲ್‌ಚೇರ್ ನನ್ನು ಅವಲಂಬಿಸಿದ್ದ ಮಗು ಇದೀಗ ಚೇತರಿಸಿಕೊಂಡಿದೆ. ತಾಯಿಯೂ ಸಹ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.Sign in to your account
Username or Email Address


Password

 Remember Me


