ಶಿವಮೊಗ್ಗ: ಕಲ್ಲು ತೂರಾಟ, ಹಿಂಸಾಚಾರ ಬಿಟ್ಟು ಬಿಡಿ. ನಿಮಗಿಂತ ಹೆಚ್ಚಾಗಿ ನನಗೆ ರೋಷ ಇದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಯುವಕ ಹರ್ಷನ ಬರ್ಬರವಾಗಿ ಕೊಲೆಯಾಗಿದ್ದು, ಮೃತದೇಹ ನೋಡಲು ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಭೇಟಿ ನೀಡಿದ್ದಾರೆ. ಬಳಿಕ ಸೀಗೆಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಮೋದಿ, ಬಿಎಸ್‍ವೈ, ಸಿಎಂ ಮಾತು ಕೇಳಬೇಕು. ಕಲ್ಲು ತೂರಾಟ, ಹಿಂಸಾಚಾರ ಬಿಡಿ. ನಿಮಗಿಂತ ಹೆಚ್ಚಾಗಿ ನನಗೆ ರೋಷ ಇದೆ ಎಂದು ತಿಳಿಸಿದ್ದಾರೆ.ಎಲ್ಲಾರೂ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ ಅಂತಾ ಹೇಳ್ತಿದ್ದಾರೆ. ನೀವು ಹೇಳಿದಂಗೆ ಎನ್‍ಕೌಂಟರ್ ಮಾಡೋಕ್ಕೆ ಆಗಲ್ಲ. ಶಿವಮೊಗ್ಗದಲ್ಲಿ ಮೊದಲು ಶಾಂತಿ ಕಾಪಾಡೋಣ. ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳಬೇಕು, ಕೈಗೊಳ್ಳುತ್ತೆ ಎಂದರು.  ಇದನ್ನೂ ಓದಿ: ನಮ್ಮ ಸರ್ಕಾರ ಬಂದ ಮೇಲೂ ಕೊಲೆ ಆಗಿರೋದು ನನಗೆ ನಾಚಿಕೆ ತರ್ತಿದೆ: ಪ್ರತಾಪ್ ಸಿಂಹ ಕಿಡಿಕೊಲೆ ಪ್ರಕರಣ ಸಂಬಂಧ ಇಂದು ಬೆಳಗ್ಗೆ ಮಾತನಾಡಿದ್ದ ಈಶ್ವರಪ್ಪ, ನಮ್ಮ ಸಜ್ಜನ ಕಾರ್ಯಕರ್ತನ ಕೊಲೆ ಆಗಿದೆ. ಮುಸಲ್ಮಾನ ಗೂಂಡಾಗಳಿಂದ ಈ ಕೊಲೆ ನಡೆದಿದೆ. ಶಿವಮೊಗ್ಗದಲ್ಲಿ ಈ ಮುಸಲ್ಮಾನ ಗೂಂಡಾಗಳು ಬಾಲ ಬಿಚ್ಚಿರಲಿಲ್ಲ. ಕೇಸರಿ ಶಾಲು ಹಂಚಿದ್ದಾರೆ. ರಾಷ್ಟ್ರಧ್ವಜ ತೆಗೆದು ಭಗವಾಧ್ವಜ ಹಾರಿಸಿದ್ದಾರೆ ಎಂಬಂತಹ ಡಿ.ಕೆ. ಶಿವಕುಮಾರ್ ಅವರ ಪ್ರಚೋದನಕಾರಿ ಹೇಳಿಕೆಗಳಿಂದ ಕುಮ್ಮಕ್ಕು ಪಡೆದು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ. ಮುಸಲ್ಮಾನ ಗೂಂಡಾಗಳಿಗೆ ಇಷ್ಟು ಧೈರ್ಯ ಬಂದಿದೆ. ಸರ್ಕಾರ ಈ ಬಗ್ಗೆ ತನಿಖೆ ಮಾಡುತ್ತಿದೆ ಎಂದು ಕಿಡಿಕಾರಿದ್ದರು. ಸಚಿವರ ಈ ಹೆಳಿಕೆ ಭಾರೀ ವಿವಾದ ಎಬ್ಬಿಸಿದ್ದು, ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ವಜಾಗೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹSign in to your account
Username or Email Address


Password

 Remember Me


