ಪುನೀತ್ ರಾಜ್ ಕುಮಾರ್ ನಿಧನಾ ನಂತರ ಅವರ ಸಾವಿರಾರು ಅಭಿಮಾನಿಗಳು ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದರು. ನೇತ್ರದಾನದಂತಹ ಪವಿತ್ರ ಕಾರ್ಯ ಮುಂದುವರೆಯುತ್ತಲೇ ಇದೆ. ಪುನೀತ್ ರಾಜ್ ಕುಮಾರ್ ಅವರನ್ನು ಆದರ್ಶವಾಗಿ ತಗೆದುಕೊಂಡಿದ್ದ ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಜೋಡಿಯೊಂದು ಸೀಮಂತ ಕಾರ್ಯಕ್ರಮದಲ್ಲೇ ನೇತ್ರದಾನ ಮಾಡಿದೆ. ಇದನ್ನೂ ಓದಿ : ನಟ ಧನ್ವೀರ್ ಮೇಲೆ ನಿಲ್ಲುತ್ತಿಲ್ಲ ದಾಳಿ : ದಾಳಿ ಹಿಂದೆ ಸ್ಟಾರ್ ನಟರ ಕೈವಾಡ?
ಕಾಮಿಡಿ ಕಿಲಾಡಿಗಳು ಅಂದಾಕ್ಷಣ ಥಟ್ಟನೆ ನೆನಪಾಗುವ ಜೋಡಿ ಗೋವಿಂದೇಗೌಡ ಮತ್ತು ದಿವ್ಯಶ್ರೀ ಅವರದ್ದು. ಕಾಮಿಡಿ ಕಿಲಾಡಿಗಳು ಶೋಗೆ ಸ್ಪರ್ಧೆಯಾಗಿ ಬಂದವರು, ನಂತರ ಸ್ನೇಹಿತರಾದರು. ಆನಂತರ ಪ್ರೇಮಿಗಳಾದರು. ಪ್ರೇಮವೇ ಸಪ್ತಪದಿ ತುಳಿಯುವುದಕ್ಕೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ದಿವ್ಯಶ್ರೀ ಅವರ ಸೀಮಂತ ಕಾರ್ಯಕ್ರಮವಾಯಿತು. ಅಂದು ಈ ದಂಪತಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನೇತ್ರದಾನ ಮಾಡುವ ಮೂಲಕ ನವ ಜೋಡಿಗಳಿಗೆ ಮಾದರಿಯಾದರು. ಇದನ್ನೂ ಓದಿ : ಶಬ್ದ ಚಿತ್ರದ ವಿಭಿನ್ನ ಪಾತ್ರದಲ್ಲಿ ಮೇಘನಾ ರಾಜ್ : ನಿರ್ದೇಶಕ ಕಾಂತ ಹೇಳಿದ್ದೇನು?
ಮೊದಲಿನಿಂದಲೂ ನನಗೆ ಪುನೀತ್ ರಾಜ್ ಕುಮಾರ್ ಅಂದರೆ ಇಷ್ಟ. ಅವರ ಸಿನಿಮಾಗಳನ್ನೇ ನೋಡಿಕೊಂಡು ಬೆಳೆದವರು ನಾವು. ಅಂತಹ ಮಹಾನ್ ನಟರೇ ಕಣ್ಣುದಾನ ಮಾಡಿದ್ದಾರೆ. ಅವರಿಂದ ಸ್ಫೂರ್ತಿಗೊಂಡು ನಾವು ಕೂಡ ಈ ಕೆಲಸಕ್ಕೆ ಮುಂದಾದೆವು ಅನ್ನುತ್ತಾರೆ ಕಿಲಾಡಿ ಜೋಡಿ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ
ತಾವು ಮಾತ್ರ ನೇತ್ರದಾನ ಮಾಡಿಲ್ಲ, ಜತೆಗೆ ಇದೇ ವೇಳೆ ನೇತ್ರದಾನ ಶಿಬಿರವನ್ನು ಕೂಡ ಅವರು ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಡಾ.ರಾಜ್ ಐ ಬ್ಯಾಂಕಿನ ಸಿಬ್ಬಂದಿ ಕೂಡ ಹಾಜರಿತ್ತು.Sign in to your account
Username or Email Address


Password

 Remember Me


