ಚೆನ್ನೈ: ನಾನು ಇಂತಹ ರಾಜಕೀಯದ ವಿರುದ್ಧ ಸತ್ತಿದ್ದೇನೆ ಎಂದು ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಮಕ್ಕಳ ನೀತಿ ಮಯ್ಯಂ ಮುಖ್ಯಸ್ಥ ಕಮಲ್ ಹಾಸನ್ ಹೇಳಿದ್ದಾರೆ.ಮಹಾತ್ಮಾ ಗಾಂಧಿಯವರ ಹತ್ಯೆಯ ಬಗ್ಗೆ ಮಾತನಾಡಿದ ಅವರು, ನಾವು 1948ರ ಜನವರಿ 30 ರಿಂದ ಕೊಲೆಯನ್ನು ಪ್ರಾರಂಭಿಸಿದ್ದೇವೆ. ಅದು ಇನ್ನೂ ಮುಂದುವರೆದಿದೆ ಎಂದಿದ್ದಾರೆ. ಭಾನುವಾರ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಜಬ್ ಮತ್ತು ಕೊಲೆ ನಡುವೆ ಸಂಬಂಧವಿರುವುದನ್ನು ನಿರಾಕರಿಸಿದ್ದಾರೆ. ಇದನ್ನೂ ಓದಿ: ಇಂಟಲಿಜೆನ್ಸ್ ಈಶ್ವರಪ್ಪ ಹತ್ರ ಇದೆಯಾ..?- ಪ್ರಿಯಾಂಕ್ ಖರ್ಗೆ ಕಿಡಿಈ ಹತ್ಯೆಯ ನಂತರ ಬಳಿಕ ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆSign in to your account
Username or Email Address


Password

 Remember Me


