ಪತಿ ಚಿರಂಜೀವಿ ಸರ್ಜಾ ನಿಧನಾನಂತರ ನಟಿ ಮೇಘನಾ ರಾಜ್ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಪನ್ನಗಭರಣ ಚಿತ್ರದಲ್ಲಿ ಅವರು ನಟಿಸಲಿದ್ದಾರೆ ಎನ್ನುವ ಸುದ್ದಿಯಿದ್ದರೂ, ಅದಿನ್ನೂ ತಡ. ಅದಕ್ಕೂ ಮುನ್ನ ಅವರು ‘ಶಬ್ದ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈಗಾಗಲೇ ಮೂರು ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ನಡೆದಿದ್ದು, ಈ ಕುರಿತು ಪಬ್ಲಿಕ್ ಟಿವಿ ಜತೆ ನಿರ್ದೇಶಕ ಕಾಂತ ಕನ್ನಳ್ಳಿ ಮಾತನಾಡಿದ್ದಾರೆ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿಕ್ರೈಂ ಥಿಲ್ಲರ್ ಸ್ಟೋರಿ
ಮೇಘನಾ ರಾಜ್ ನಟಿಸುತ್ತಿರುವ ಶಬ್ದ ಸಿನಿಮಾ ಮಿಸ್ಟೀರಿಯಸ್ ಕ್ರೈಂ ಥ್ರಿಲ್ಲರ್ ಕಥಾನಕ ಹೊಂದಿದೆ. ಮೊದಲ ಬಾರಿಗೆ ಮೇಘನಾ ರಾಜ್ ಇಂಥದ್ದೊಂದು ಪಾತ್ರ ನಿರ್ವಹಿಸುತ್ತಿರುವುದು ವಿಶೇಷ. ಬರೋಬ್ಬರಿ ನಾಲ್ಕು ಗೆಟಪ್ ಗಳಲ್ಲಿ ಅವರ ಪಾತ್ರವನ್ನು ನೋಡಬಹುದಂತೆ. ನಾಲ್ಕೂ ಗೆಟಪ್ ಬಂದಾಗಲೂ ವಿಶೇಷ ರೀತಿಯ ಕಾಸ್ಟ್ಯೂಮ್ ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ : ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusiveಕಾಂತ ಜತೆ ಎರಡನೇ ಸಿನಿಮಾ
ಮೇಘನಾ ರಾಜ್ ಮತ್ತು ನಿರ್ದೇಶಕ ಕಾಂತ ಕನ್ನಳ್ಳಿ ಕಾಂಬಿನೇಷನ್ ನ ಎರಡನೇ ಸಿನಿಮಾ ಶಬ್ದ. ಈ ಹಿಂದೆ ‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ಜೋಡಿ ಒಂದಾಗಿತ್ತು. ಕಾಂತಾ ಅವರ ಕಾರ್ಯವೈಖರಿಗೆ ಮಾರು ಹೋಗಿರುವ ಮೇಘನಾ ರಾಜ್, ಪತಿಯ ಕಳೆದುಕೊಂಡ ದುಃಖದಲ್ಲಿದ್ದರೂ, ಕಥೆಯ ಕಾರಣದಿಂದಾಗಿ ಮತ್ತೆ ನಟಿಸಲು ಮುಂದಾಗಿದ್ದಾರೆ. ಸಿನಿಮಾ ಇಡೀ ಕಥೆ ಮೇಘನಾ ಅವರ ಪಾತ್ರದ ಸುತ್ತಲೇ ಹೆಣೆದಿರುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಒಲವಿನ ಉಡುಗೊರೆಗೆ 35 ವರ್ಷಭಾವುಕರಾದ ಕಾಂತ
ಮೊದಲ ದಿನ ಮೇಘನಾ ರಾಜ್ ಚಿತ್ರೀಕರಣಕ್ಕೆ ಬಂದಾಗ ನಿರ್ದೇಶಕ ಕಾಂತ ಭಾವುಕರಾದರಂತೆ. ಮೇಘನಾ ಅವರಿಗೆ ಮುಖಕೊಟ್ಟು ಮಾತನಾಡಲು ಆಗದಷ್ಟು ಸಂಕಟವಾಗುತ್ತಿತ್ತಂತೆ. ತಮ್ಮ ಮೊದಲ ಚಿತ್ರದಲ್ಲಿ ನೋಡಿದ ಮೇಘನಾ ಮತ್ತು ಇದೀಗ ಇರುವ ಮೇಘನಾರನ್ನು ನೆನಪಿಸಿಕೊಳ್ಳುವುದೇ ಕಷ್ಟ ಎನ್ನುತ್ತಾರೆ ನಿರ್ದೇಶಕರು.
ಬೆಂಗಳೂರಿನಲ್ಲಿಯೇ ಒಂದು ಹಂತದ ಶೂಟಿಂಗ್ ಆಗಿದ್ದು, ಇದೀಗ ಬ್ರೇಕ್ ನೀಡಲಾಗಿದೆ. ವಿಜಯ್ ಎಮ್.ಎನ್ ಶೆಟ್ಟಿ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು, ಪಿ.ಕೆ.ಎಚ್ ದಾಸ್ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.Sign in to your account
Username or Email Address


Password

 Remember Me


