ಸಿನಿಮಾ ರಂಗದಲ್ಲಿ ಹೊಸ ಕಲಾವಿದರಿಗೆ ಸಾಮಾನ್ಯವಾಗಿ ಆಡಿಷನ್ ಮಾಡಿಯೇ ಸಿನಿಮಾಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಈ ಹುಡುಗಿಗೆ ನಟಿಸಲು ಅದೃಷ್ಟ ಒಲಿದು ಬಂದಿದ್ದು ಜಿಮ್ ನಲ್ಲಿ. ಈ ರೀತಿಯಲ್ಲಿ ಆಯ್ಕೆ ಮಾಡಿಕೊಂಡವರು ಕಿಚ್ಚ ಸುದೀಪ್ ಅಭಿಮಾನಿ ಸಂಘದ ಉಪಾಧ್ಯಕ್ಷ ಮತ್ತು ದಶಕಗಳಿಂದ ಸಿನಿಮಾ ರಂಗದ ಜತೆ ಒಡನಾಟ ಇಟ್ಟುಕೊಂಡಿರುವ ಜಗ್ಗಿ ಎನ್ನುವುದು ವಿಶೇಷ. ಇದನ್ನೂ ಓದಿ : ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?
ಇತ್ತೀಚೆಗಷ್ಟೇ ‘ಮರ್ದಿನಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ನಟ ಕಿಚ್ಚ ಸುದೀಪ್ ವಿಡಿಯೋ ಸಂದೇಶದ ಮೂಲಕ ಟ್ರೇಲರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಈ ಸಿನಿಮಾದ ನಾಯಕಿ ರಿತನ್ಯ ಹೂವಣ್ಣ ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್“ಈ ಸಿನಿಮಾದ ನಿರ್ಮಾಪಕ ಜಗ್ಗಿ ಅವರು ನನಗೆ ಜಿಮ್ ನಲ್ಲಿ ಭೇಟಿಯಾದರು. ಅಲ್ಲಿಯೇ ಅವರ ಪರಿಚಯವಾಗಿದ್ದು. ಒಂದು ದಿನ ಏಕಾಏಕಿ, ನೀವು ನಮ್ಮ ಸಿನಿಮಾದ ನಾಯಕ ಎಂದು ಅಚ್ಚರಿ ಮೂಡಿಸಿದರು. ಹುಡುಗಿಗೆ ಇವರು ನಾಯಕ ಅನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ಇದೊಂದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ನೀವು ನಾಯಕ ಕಂ ನಾಯಕಿ ಎಂದಾಗ ನಕ್ಕಿದೆ. ಮುಂದೊಂದು ದಿನ ಅದೇ ನಿಜವಾಯಿತು. ನನಗೆ ಈ ಚಿತ್ರಕ್ಕೆ ಅವಕಾಶ ಸಿಕ್ಕಿದ್ದು ಹೀಗೆ” ಎಂದರು. ರಿತನ್ಯ ಹೂವಣ್ಣ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ : ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!
ಈ ಹಿಂದೆ ಪ್ರಥಮ್ ಅಭಿನಯದ “ದೇವ್ರಂಥ ಮನುಷ್ಯ” ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕಿರಣ್ ಕುಮಾರ್ ಅವರೇ ಈ ಚಿತ್ರದ ನಿರ್ದೇಶಕರು. ಎರಡನೇ ಸಿನಿಮಾದಲ್ಲಿಯೇ ಅವರು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.Sign in to your account
Username or Email Address


Password

 Remember Me


