ಚಿಕ್ಕಬಳ್ಳಾಪುರ: ನಂದಿಬೆಟ್ಟ ನೋಡಲು ಬಂದು ಪ್ರವಾಸಿಗ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಆತನ ರಕ್ಷಣೆಗಾಗಿ ಆಗ್ನಿಶಾಮಕದಳ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದಾರೆ.ದೆಹಲಿ ಮೂಲದ ನಿಶಾಂತ್ ಅಪಾಯಕ್ಕೆ ಸಿಲುಕಿಕೊಂಡಿರುವ ಯುವಕ. ವೀಕೆಂಡ್ ಎಂದು ನಂದಿಬೆಟ್ಟಕ್ಕೆ ಬಂದ ಹಿನ್ನೆಲೆ ನಿಶಾಂತ್ ಮತ್ತು ಆತನ ಸ್ನೇಹಿತರು ಬ್ರಹ್ಮಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಟ್ರೆಕ್ಕಿಂಗ್ ಮಾಡುವ ವೇಳೆ ನಿಶಾಂತ್ ಕಾಲು ಜಾರಿ ಬಿದ್ದಿದ್ದಾನೆ. ಸಹಾಯಕ್ಕಾಗಿ ಸರ್ಕಾರದ ಕಂಟ್ರೋಲ್ ರೂಂ ಗೆ ಯುವಕ ಕರೆ ಮಾಡಿದ್ದಾನೆ. ಪರಿಣಾಮ ನಿಶಾಂತ್ ಉಳಿಸಲು ಆಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪೊಲೀಸ್ ಮಗಳನ್ನೆ ಕತ್ತು ಹಿಸುಕಿ ಕೊಂದ ಸ್ನೇಹಿತೆಯ ಪತಿ!ಕರೆ ಮಾಡಿದ ತಕ್ಷಣ ಪೊಲೀಸರು ಹಾಗೂ ಆಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಅವರಿಗೆ ಈ ಯುವಕ ಕಡಿದಾದ ಪ್ರದೇಶ ದುರ್ಗಮ ಹಾದಿಯಲ್ಲಿ ಪತ್ತೆಯಾಗಿದ್ದಾನೆ.ಪ್ರಸ್ತುತ ಸಿಬ್ಬಂದಿ, ನಿಶಾಂತ್ ರಕ್ಷಣೆ ಮಾಡಲು ಯತ್ನನಿಸುತ್ತಿದ್ದಾರೆ.Sign in to your account
Username or Email Address


Password

 Remember Me


