ಬೆಂಗಳೂರು: ಪ್ರಭಾವಿ ರಾಜಕಾರಣಿಯೊಬ್ಬರು ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿಸಿದ್ದಾರೆ.ರಾಜಕಾರಣಿ ಪುತ್ರನ ಗರ್ಲ್‍ಫ್ರೆಂಡ್‍ಗೆ ಹುಳಿಮಾವು ರೌಡಿಶೀಟರ್ ನಂದೀಶ್‍ನಿಂದ ಧಮ್ಕಿ ಆರೋಪ ವ್ಯಕ್ತವಾಗಿದೆ. ಬೆಂಗಳೂರು ಬಿಟ್ಟು ಹೋಗು, ಇಲ್ಲ ನಿನ್ನ ಖಾಸಗಿ ಫೋಟೋ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಯುವತಿಯ ಖಾಸಗಿ ಫೋಟೋ ವೀಡಿಯೋಗಳನ್ನು ಅವಳ ತಂದೆ ಹಾಗೂ ಆಕೆಯ ಬಾಯ್‍ಫ್ರೆಂಡ್‍ಗೆ ವಾಟ್ಸಾಪ್ ಮಾಡಿದ್ದಾನೆ. ಇದನ್ನೂ ಓದಿ: ಮೊಬೈಲ್‍ಗಾಗಿ ಪೆಟ್ರೋಲ್ ಸುರಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಉತ್ತರ ಭಾರತದ 25 ವರ್ಷದ ಯುವತಿಯು ಆಗ್ನೇಯ ವಿಭಾಗ ಸೈಬರ್ ಕ್ರೈಂ ಪೊಲೀಸರಿಗೆ ರೌಡಿಶೀಟರ್ ನಂದೀಶ್‍ನ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ವೇಳೆ ಯುವತಿಯ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ರೌಡಿಶೀಟರ್ ನಂದೀಶ್ ಪ್ರಬಲ ರಾಜಕಾರಣಿಯ ಬಲಗೈ ಬಂಟನಾಗಿದ್ದಾನೆ.Sign in to your account
Username or Email Address


Password

 Remember Me


