ಕಲಬುರಗಿ: ಹಿಜಬ್, ಕೇಸರಿ ವಿವಾದದ ಜೊತೆಗೆ ಇದೀಗ ಬಿಂದಿ ಚರ್ಚೆ ಪ್ರಾರಂಭವಾಗಿದೆ. ಬಿಂದಿ ಹಾಕಿಕೊಂಡು ಶಾಲೆಗೆ ಬರುತ್ತಾರೆ ಎಂಬ ಮುಸ್ಲಿಂ ವಿದ್ಯಾರ್ಥಿನಿಯರ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿ ಕಲಬುರಗಿಯಲ್ಲಿ ಸಿಂಧೂರ ಚಳವಳಿ ಪ್ರಾರಂಭವಾಗಿದೆ.ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂಪರ ಸಂಘಟನೆಯ ಮಹಿಳೆಯರಿಂದ ಸಿಂಧೂರ ಚಳವಳಿ ಆರಂಭವಾಗಿದೆ. ಬಿಜೆಪಿ ಮುಖಂಡರಾದ ಹಿಂದೂ ಪರ ಸಂಘಟನೆಯ ಕಾರ್ಯಕರ್ತೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಸಿಂಧೂರ ಚಳವಳಿ ಆರಂಭವಾಗಿದ್ದು, ಹಿಂದೂ ಸಂಸ್ಕೃತಿಯ ಪ್ರಕಾರ ಮಹಿಳೆಯರಿಗೆ ಕೇಸರಿ ಶಾಲು ಹಾಕಿ, ಅರಿಸಿಣ-ಕುಂಕುಮ ಹಚ್ಚಿ, ಬಳೆ ಕೊಟ್ಟು, ಹೂವು ನೀಡಿ ಸಿಂಧೂರ ಚಳವಳಿಗೆ ಚಾಲನೆ ನೀಡಲಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತೆ ದಿವ್ಯಾ ಹಾಗರಗಿ, ಸಿಂಧೂರ ಹಚ್ಚಿಕೊಳ್ಳುವುದು ನಮ್ಮ ಧರ್ಮದ ಸಂಸ್ಕೃತಿ ಆಗಿದೆ. ಹಿಂದೂ ಧರ್ಮದ ಸಂಸ್ಕೃತಿ-ಪರಂಪರೆಯಂತೆ ನಾವು ನಡೆಯುತ್ತೇವೆ ಎಂದ ಅವರು, ಹಿಜಬ್ ಪ್ರಕರಣವು ನ್ಯಾಯಲಯದ ಅಂಗಳದಲ್ಲಿ ಇರುವುದರಿಂದ ಮಧ್ಯಂತರ ಆದೇಶವನ್ನು ಪಾಲನೆ ಮಾಡುತ್ತಿದ್ದು, ಎಲ್ಲರೂ ತೀರ್ಪು ಪಾಲನೆ ಮಾಡಬೇಕು ಎಂದು ನುಡಿದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್ಮುಂಬರುವ ದಿನಗಳಲ್ಲಿ ಸಿಂಧೂರ ಚಳವಳಿಯೂ ಸಿಂದಗಿ ಅಂಬಾಬಾಯಿ ದೇವಸ್ಥಾನ, ಕೋರಂಟಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಸಿಣ, ಕುಂಕುಮ ಕೊಡುವ ಮೂಲಕ ನಡೆಯಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ದಾವುದ್ ಅಲ್ಲ, ದಾವುದ್ ಅಪ್ಪ ಬಂದ್ರು ಕೂಡ ಏನು ಮಾಡಲು ಆಗಲ್ಲ: ಪ್ರಮೋದ್ ಮುತಾಲಿಕ್ಈ ಸಂದರ್ಭದಲ್ಲಿ ಭಾಗೀರಥಿ ಗುನ್ನಾಪುರ, ಸವಿತಾ ಪಾಟೀಲ್, ಸಿದ್ದಮ್ಮಾ, ಇಂದಿರಾ ಸೇರಿದಂತೆ ಅನೇಕ ಹಿಂದೂ ಪರ ಸಂಘಟನೆಯ ಮುಖಂಡರು, ಬಿಜೆಪಿ ಕಾರ್ಯಕರ್ತೆಯರು ಭಾಗವಹಿಸಿದ್ದರು.Sign in to your account
Username or Email Address


Password

 Remember Me


