ತೆಲುಗಿನ ಕ್ರೇಜಿಸ್ಟಾರ್ ಎಂದೇ ಖ್ಯಾತರಾಗಿರುವ ರಾಮ್ ಪೋತಿನೇನಿ ಇದೀಗ ಪ್ಯಾನ್ ಇಂಡಿಯಾ ಸಿನಿಮಾವನ್ನು ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಅಖಂಡ ಚಿತ್ರ ಖ್ಯಾತಿಯ ನಿರ್ದೇಶಕ ಬೋಯಾಪಟಿ ಶ್ರೀನು ನಿರ್ದೇಶನ ಮಾಡಲಿದ್ದಾರೆ. ಇದನ್ನೂ ಓದಿ : ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು
ಟಾಲಿವುಡ್ ನ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಹಾಗೂ ಬೋಯಾಪಟಿ ಶ್ರೀನು ಕಾಂಬೋದ ‘ಅಖಂಡ’ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಗೆ ಸೇರಿದ ಬೆನ್ನಲ್ಲೇ ಈ ಹೊಸ ಸಿನಿಮಾ ಬರುತ್ತಿದ್ದು ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿದೆ. ಇದನ್ನೂ ಓದಿ : ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು
ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಶ್ರೀನಿವಾಸ ತಮ್ಮದೇ ಸಿಲ್ವರ್ ಸ್ಕ್ರೀನ್ ಬ್ಯಾನರ್‌ನ ಅಡಿಯಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬ್ಲಾಕ್‌ಬಸ್ಟರ್‌ಗಳ ನೀಡಿದ್ದು, ಸದ್ಯ ರಾಮ್ ಪೋತಿನೇನಿ ಅಭಿನಯದ ಮತ್ತು ಎನ್ ಲಿಂಗುಸಾಮಿ ನಿರ್ದೇಶನದ ದಿ ವಾರಿಯರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾ ರಿಲೀಸ್ ಮುನ್ನ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ : ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?
ಒಂದು ಮೆಗಾ ಪ್ರಾಜೆಕ್ಟ್ ಸಿನಿಮಾ ಆಗಿದ್ದು, ಸದ್ಯದಲ್ಲಿಯೇ ಸಿನಿಮಾದ ಟೈಟಲ್, ನಾಯಕಿ ಮತ್ತು ಇತರ ಪಾತ್ರವರ್ಗಗಳ‌ ಬಗ್ಗೆ ಮಾಹಿತಿ ನೀಡಲಿದೆಯಂತೆ ಚಿತ್ರತಂಡ.Sign in to your account
Username or Email Address


Password

 Remember Me


