ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಹಲವು ವರ್ಷಗಳ ಬಳಿಕ ಮತ್ತೆ ಚಂದನವನಕ್ಕೆ ಕಮ್‍ಬ್ಯಾಕ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಮೇಘನಾ ರಾಜ್ ಮತ್ತೊಂದು ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು,  ಸಿನಿಮಾದ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.ಸ್ನೇಹಿತ ಪನ್ನಾಗಭರಣ ಆ್ಯಕ್ಷನ್ ಕಟ್ ಹೇಳುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ಮೇಘನಾ ರಾಜ್ ಅಭಿನಯಿಸುತ್ತಿದ್ದು, ಇದರ ಬೆನ್ನೆಲ್ಲೆ ಖಾಸಗಿ ವಾಹಿನಿಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಸಿನಿಮಾದಲ್ಲಿ ಮೇಘನಾ ರಾಜ್ ನಟಿಸುತ್ತಿರುವುದಾಗಿ ತಿಳಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.ಈ ಹಿಂದೆ ಇರುವುದೆಲ್ಲವ ಬಿಟ್ಟು ಸಿನಿಮಾದಲ್ಲಿ ಅಭಿನಯಿಸಿದ್ದ ಮೇಘನಾ ರಾಜ್ ಇದೀಗ ಅದೇ ಚಿತ್ರತಂಡದೊಂದಿಗೆ ಶಬ್ಧ ಎಂಬ ಹೊಸ ಸಿನಿಮಾದಲ್ಲಿ ಬಣ್ಣಹಚ್ಚುತ್ತಿರುವುದಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ತಿಳಿಸಿದ್ದಾರೆ. ಇದನ್ನು ಓದಿ: ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿಸದ್ಯ ಈ ವಿಚಾರವಾಗಿ ಫೋಟೋವೊಂದನ್ನು ಹಂಚಿಕೊಂಡಿರುವ ಮೇಘನಾ ರಾಜ್, ಈ ಹಿಂದೆ ನಟಿಸಿದ್ದ ಇರುವುದೆಲ್ಲವ ಬಿಟ್ಟು ಸಿನಿಮಾ ತಂಡದೊಂದಿಗೆ ನನ್ನ ಮುಂದಿನ ಸಿನಿಮಾ ಶಬ್ಧ ಎಂದು ಘೋಷಿಸುತ್ತಿದ್ದೇನೆ. ಈ ಸಿನಿಮಾಕ್ಕಾಗಿ ನನಗೆ ರಾಜ್ಯ ಪ್ರಶಿಸ್ತಿ ಸಿಕ್ಕಿತ್ತು. ಹೀಗಾಗಿ ಈ ಚಿತ್ರತಂಡದ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಕಂಠಕನ್ನಳ್ಳಿ ಅವರೊಂದಿಗೆ 2ನೇ ಬಾರಿ ಕೆಲಸ ಮಾಡುತ್ತಿರುವುದು ಖಂಡಿತಾ ವರದಾನ. ಶೀಘ್ರದಲ್ಲೇ ಮುಂದಿನ ಅಪ್‍ಡೇಟ್ ನೀಡುತ್ತೇನೆ. ನಿಮ್ಮ ಬೆಂಬಲ ಮತ್ತು ಪ್ರಾರ್ಥನೆಗಳಿಗಾಗಿ ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.  A post shared by Meghana Raj Sarja (@megsraj)ಒಟ್ಟಾರೆ ಒಂದೊಂದೇ ಸಿನಿಮಾಗಳು ಇದೀಗ ಮೇಘನಾ ಬಳಿ ಹುಡುಕಿಕೊಂಡು ಬರುತ್ತಿದ್ದು, ಆದಷ್ಟು ಬೇಗ ಬಿಗ್‍ಸ್ಕ್ರೀನ್ ಮೇಲೆ ಮೇಘನಾ ಅಭಿಮಾನಿಗಳ ಮುಂದೆ ಮಿಂಚಲಿದ್ದಾರೆ ಎಂದೇ ಹೇಳಬಹುದು. ಇದನ್ನು ಓದಿ: ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್






 Advertisement 




Sign in to your account
Username or Email Address


Password

 Remember Me


