ಉಡುಪಿ: ರಾಜ್ಯದಲ್ಲಿ ಹಿಜಬ್ ಫೈಟ್ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈ ಬೆನ್ನಲ್ಲೇ ಉಡುಪಿ ಸರ್ಕಾರಿ ಪದವಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ರಾಜಕಾರಣಿಗಳ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.ಹಿಜಬ್-ಕೇಸರಿ ವಿವಾದಕ್ಕೆ ರಾಜಕಾರಣಿಗಳೇ ಕಾರಣ. ಪಾಕಿಸ್ತಾನಕ್ಕೆ ಹೋಗಿ ಅಂತೀರಲ್ಲ, ಪಾಕಿಸ್ತಾನ ನಿಮ್ಮಪ್ಪನ ಮನೆಯಾ..? ನಮ್ಮನ್ನ ಟೆರರಿಸ್ಟ್ ಹೇಳ್ತೀರಾ..? ನಮ್ಮ ಬ್ಯಾಗ್‍ನಲ್ಲಿ ಎಕೆ 47 ಇದ್ಯಾ ಎಂದು ಪ್ರಶ್ನಿಸುವ ಮೂಲಕ ಉಡುಪಿಯಲ್ಲಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿಯರು ವಾಗ್ದಾಳಿ ನಡೆಸಿದ್ದಾರೆ.ನಾವು ಭಾರತೀಯರು. ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯ್ತೀವಿ. ನಾವು ಪಾಕಿಸ್ತಾನಕ್ಕೆ ಹೋದರೆ ಅವರೇನು ನಮ್ಮನ್ನು ಆರತಿ ಮಾಡಿ ಬರಮಾಡಿಕೊಳ್ಳುತ್ತಾರಾ?. ನೀವು ಮೊದಲು ಪಾಕಿಸ್ತಾನಕ್ಕೆ ಹೋಗಿ. ನಿಮ್ಮ ಹಿಂದೆ ನಾವು ಬರುತ್ತೇವೆ. ನೀವು ಕೊರೋನಾಗೆ ಹೆದರಿ ಮಾಸ್ಕ್ ಹಾಕಲ್ವಾ..? ನಾವು ದೇವರಿಗೆ ಹೆದರಿ ಹಿಜಬ್ ಹಾಕ್ತೀವಿ ಎಂದು ರಾಜಕಾರಣಿಗಳ ವಿರುದ್ಧ ವಿದ್ಯಾರ್ಥಿನಿಯರು ಗರಂ ಆಗಿದ್ದಾರೆ. ಇದನ್ನೂ ಓದಿ: ಸಂಘ ಪರಿವಾರದ ತಾಳಕ್ಕೆ ಕುಣಿಯುತ್ತಾ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ಕಸಿಯುತ್ತಿದೆ ಬಿಜೆಪಿ: ಸಿದ್ದು

 Advertisement 

ನಾವು ನಮ್ಮ ತಲೆಗೆ ಸ್ಕಾರ್ಸ್ ಕಟ್ಟಿಕೊಳ್ಳುತ್ತೇವೆ ಮೆದುಳಿಗೆ ಅಲ್ಲ ಎಂದು ಚಾಟಿ ಬೀಸಿದ್ದಾರೆ. ಆರು ಹಿಜಬ್ ಹೋರಾಟಗಾರ್ತಿಯಿಗೆ ಎಲ್ಲರೂ ಬೆಂಬಲ ಕೊಡುತ್ತೇವೆ. ನಮ್ಮ ಪೋಷಕರು ನಮಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಂಧೂರ,ಕುಂಕುಮಕ್ಕೆ ನಿರಾಕರಣೆ: ಸ್ಪಷ್ಟನೆ ನೀಡಿದ ಇಂಡಿ ಕಾಲೇಜು ಪ್ರಿನ್ಸಿಪಾಲ್‌

Sign in to your account
Username or Email Address

Password

 Remember Me