ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರದಿಂದ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಹಲವು ಸ್ವಾರಸ್ಯಕರ ಚರ್ಚೆಗೂ ಸಾಕ್ಷಿಯಾಗುತ್ತಿದೆ. ಅಹೋರಾತ್ರಿ ಧರಣಿಗೆ ಇಬ್ಬರಿಗೆ ವಿನಾಯ್ತಿ ನೀಡಿದ್ದಾರಂತೆ. ಸ್ವತಃ ಸಿದ್ದರಾಮಯ್ಯ ಅವರೇ ಆ ಇಬ್ಬರ ಹೆಸರನ್ನ ಮೊಗಸಾಲೆಯಲ್ಲಿ ಹೇಳಿ ಹಾಸ್ಯ ಮಾಡಿದ್ದಾರೆ.ಶುಕ್ರವಾರ ಕಲಾಪ ಆರಂಭಕ್ಕೂ ಮುನ್ನ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಕುಳಿತಿದ್ದರು. ಆ ಸ್ಥಳಕ್ಕೆ ಮಾಜಿ ಸಚಿವ ದೇಶಪಾಂಡೆ ಕೂಡ ಬಂದು ಸಿದ್ದರಾಮಯ್ಯ ಪಕ್ಕ ಕುಳಿತರು. ಆಗ ಸಿದ್ದರಾಮಯ್ಯ ದೇಶಪಾಂಡೆಯವರ ಕಾಲೆಳೆಯಲು ಪ್ರಾರಂಬಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಹೋರಾತ್ರಿ ಧರಣಿ – ಸಿಎಂ, ಬಿಎಸ್‍ವೈ ಸಂಧಾನ ಯತ್ನ ವಿಫಲಅಹೋರಾತ್ರಿ ಧರಣಿಗೆ ನಮ್ ಶಾಮನೂರು ಶಿವಶಂಕರಪ್ಪ, ಈ ದೇಶಪಾಂಡೆ ಇಬ್ಬರಿಗೂ ವಿನಾಯ್ತಿ ಕೊಟ್ಟಿದ್ದೇವೆ. ಇಬ್ಬರಿಗೂ ವಯಸ್ಸಾಗಿದೆ ಪಾಪ ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ.ಇದಕ್ಕೆ ತಕ್ಷಣ ರಿಯಾಕ್ಟ್ ಮಾಡಿದ ದೇಶಪಾಂಡೆ. ನಾನೇನು ಮುದುಕ ಅಲ್ಲ, ನನಗೇನು ವಯಸ್ಸಾಗಿದೆ. ನಿನಗಿಂತ ನಾನು 6 ತಿಂಗಳು ದೊಡ್ಡವನು. ಹಾಗಾದ್ರೆ ನೀನು ಮುದುಕನಾ? ಎಂದು ಸಿದ್ದರಾಮಯ್ಯಗೆ ಕೇಳಿದ್ದಾರೆ. ಇದನ್ನೂ ಓದಿ: ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ 1.5 -2 ಕೋಟಿ ರೂ.ನಷ್ಟಕ್ಕೆ ಹೊಣೆ ಯಾರು? – ಬಿಜೆಪಿ, ಕಾಂಗ್ರೆಸ್‍ನ್ನು ತಿವಿದ ಎಚ್‍ಡಿಕೆನೋಡಪ್ಪಾ, ನನಗೆ ವಯಸ್ಸಾಗಿದ್ರೂ ನಾನು ಹಾಗೆ ಕಾಣಲ್ಲ. ನೀನು ಮಾಗಿ ಬಿಟ್ಟಿದ್ದೀಯಾ. ಅದಕ್ಕೆ ಹಂಗೆ ಹೇಳ್ದೆ ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಆಗ ಅಕ್ಕ ಪಕ್ಕ ಇದ್ದ ಶಾಸಕರು ನಗೆಡಲಲ್ಲಿ ತೇಲಿದ್ದಾರೆ.Sign in to your account
Username or Email Address


Password

 Remember Me


