ಇದೇ ಫೆ.20 ರಂದು ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಡಾ.ವಿಷ್ಣುಸೇನಾ ಸಮಿತಿಯು ಹರಿಹರದಲ್ಲಿ ಹಮ್ಮಿಕೊಂಡಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಡಾ.ವಿಷ್ಣು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿದ್ಧತೆ ಮಾಡಿಕೊಂಡಿದ್ದರು. ಇದೀಗ ಆ ಕಾರ್ಯಕ್ರಮ ರದ್ದಾಗಿದೆ ಎಂದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ
“ಹರಿಹರದಲ್ಲಿ ಹಿಜಬ್-ಕೇಸರಿ ವಿವಾದದ ಕಾರಣದಿಂದಾಗಿ ಕರ್ಫ್ಯೂ ಜಾರಿಯಾಗಿದೆ. ಹಾಗಾಗಿ ಫೆ.20 ರಂದು ನಡೆಯಬೇಕಿದ್ದ ಯಜಮಾನ್ರ ಪುತ್ಥಳಿ ಅನಾವರಣಕ್ಕಾಗಿ ನಾವು ಹರಿಹರಕ್ಕೆ ಹೊರಡುವ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ. ಆದರೆ, ಪುತ್ಥಳಿ ಅನಾವರಣ ನಡೆಯುತ್ತದೆ. ಯಜಮಾನ್ರ ಯಾವ ಕೆಲಸವೂ ಸುಲಭಕ್ಕೆ ಆಗುವುದಿಲ್ಲ ಎಂಬುದು ಮತ್ತೊಮ್ಮೆ ಖಾತ್ರಿಯಾಗಿ ತುಂಬಾ ಬೇಸರವೆನಿಸಿದೆ” ಎಂದು ವೀರಕಪುತ್ರ ಶ್ರೀನಿವಾಸ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಲು ಖಡಕ್ ಸುತ್ತೋಲೆ
ಕರ್ಫ್ಯೂ ತೆರವಾದ ಕೂಡಲೇ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ಅವರು ಹೇಳಿದ್ದಾರೆ.Sign in to your account
Username or Email Address


Password

 Remember Me


