ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರ್ಪಡೆ ಆದರೆ ಸ್ವಾಗತ ಮಾಡುತ್ತೇನೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.ಪ್ರಮೋದ್ ಅವರು ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಮೋದ್ ಬಿಜೆಪಿಗೆ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಬಳಿ ಕೇಳಿ ಯಾರನ್ನೂ ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ. ಅವರು ಬಿಜೆಪಿ ಸೇರ್ಪಡೆ ಆದರೆ ಸ್ವಾಗತ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗಆಗ ಚುನಾವಣಾ ಸಂಧರ್ಭದಲ್ಲಿ ನಾನು ಅವರನ್ನು ವಿರೋಧ ಮಾಡಿದ್ದೆ. ಯಾಕೆಂದರೆ ಆಗ ನಾನು ಟಿಕೆಟ್ ಆಕಾಂಕ್ಷಿ ಆದ ಕಾರಣ ಸ್ವಾಭಾವಿಕವಾಗಿ ವಿರೋಧ ಇತ್ತು ಎಂದರು. ಇದನ್ನೂ ಓದಿ: ಸೈನ್ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ರಚಿಸಿದ 20 ವರ್ಷದ ಯುವತಿಈ ವಿಚಾರವನ್ನು ಪ್ರಮೋದ್ ಮಧ್ವರಾಜ್ ಸಿಕ್ಕಾಗ ಕೇಳುತ್ತೇನೆ. ಪ್ರಮೋದ್ ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ, ಪಕ್ಷ ಗಟ್ಟಿಯಾಗುತ್ತದೆ. ಈಗ ನಮ್ಮ ಬುಡ ಗಟ್ಟಿಯಿದೆ ಸಮಸ್ಯೆ ಇಲ್ಲ. ಅವರಿಗೆ ಪಕ್ಷದ ಗೇಟ್ ಓಪನ್ ಇದ್ದು, ಅವರು ಬರಬಹುದು ಎಂದರು.Sign in to your account
Username or Email Address


Password

 Remember Me


