ರಾಯಚೂರು: ಮೇಲ್ಬಾಗದಿಂದ ಕಲ್ಲು ಕುಸಿದು ಬಿದ್ದು ಕಾರ್ಮಿಕ ಸಾವನ್ನಪ್ಪಿ ಮತ್ತೋರ್ವ ಕಾರ್ಮಿಕರೊಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನಗರದ ದೇವದುರ್ಗ ತಾಲೂಕಿನಲ್ಲಿರುವ ಊಟಿ ಚಿನ್ನದಗಣಿಯಲ್ಲಿ ನಡೆದಿದೆ.ಯಲ್ಲಪ್ಪ ಮೃತ ಕಾರ್ಮಿಕ. ಹನುಮಂತ ಗಾಯಗೊಂಡ ಕಾರ್ಮಿಕ. ಕಾರ್ಮಿಕರು ಹಟ್ಟಿ ಗಣಿ ವ್ಯಾಪ್ತಿಯಲ್ಲಿ ಇರುವ ಊಟಿ ಚಿನ್ನದಗಣಿಯಲ್ಲಿ ಸುಮಾರು 800 ಅಡಿ ಆಳದ ಅಂಡರ್ ಗ್ರೌಂಡ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಮೇಲ್ಬಾಗದಿಂದ ಕಲ್ಲು ಕುಸಿದು ಬಿದ್ದು ವ್ಯಕ್ತಿಯು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶಗಾಯಗೊಂಡ ಕಾರ್ಮಿಕ ಹನುಮಂತ ಅವರನ್ನು ಹಟ್ಟಿ ಚಿನ್ನದಗಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುತ್ತಿಗೆ ಕಾರ್ಮಿಕರು ಟೆಕ್ನೋಮೈನ್ಸ್ ಸಂಸ್ಥೆ ಅಡಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಕಾರ್ಮಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆSign in to your account
Username or Email Address


Password

 Remember Me


