ಕನ್ನಡ ಸಿನಿ ರಂಗದ ಕುಚಿಕು ಗೆಳೆಯರೆಂದೇ ಖ್ಯಾತರಾಗಿರುವ ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಇದೀಗ ಮತ್ತೊಂದು ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆಯೇ ಮುಹೂರ್ತವಾಗಿರುವ ‘ಹೆಡ್ ಬುಷ್’ ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ತೆರೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾಹೆಡ್ ಬುಷ್ ಭೂಗತ ಜಗತ್ತಿನ ಕುರಿತಾದ ಸಿನಿಮಾ. ಅಂಡರ್ ವರ್ಲ್ಡ್ ಡಾನ್ ಆಗಿದ್ದ ಜಯರಾಜ್ ಅವರ ಜೀವನ ಕುರಿತಾದ ಚಿತ್ರ ಎನ್ನಲಾಗುತ್ತಿದೆ. ಡಾಲಿ ಧನಂಜಯ್ ಜಯರಾಜ್ ಪಾತ್ರ ಮಾಡುತ್ತಿದ್ದು, ಗೆಳೆಯ ವಸಿಷ್ಠ ಸಿಂಹ ಅವರಿಗೆ ಕೊತ್ವಾಲ್ ಪಾತ್ರ ನೀಡಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಕೂಡ ಮುಗಿದಿದ್ದು, ಅಚ್ಚರಿ ಮೂಡಿಸುವಂತಹ ತಾರಾಗಣವನ್ನು ಈ ಸಿನಿಮಾ ಹೊಂದಿದೆ. ಇದನ್ನೂ ಓದಿ : ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ, ಚಿಯರ್ಸ್ ಪಪ್ಪಾ: ರವೀನಾ ಟಂಡನ್ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಈ ಚಿತ್ರದಲ್ಲಿದ್ದಾರೆ. ಅವರು ಕಾಲೇಜು ಉಪನ್ಯಾಸಕರಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅದೊಂದು ಗಂಭೀರವಾಗಿರುವ ಪಾತ್ರ ಎಂದೂ ಅವರು ಈ ಹಿಂದೆ ಹೇಳಿಕೊಂಡಿದ್ದರು. ಅಲ್ಲದೇ, ಲೂಸ್ ಮಾದ ಯೋಗಿ, ಶ್ರುತಿ ಹರಿಹರನ್ ಸೇರಿದಂತೆ ಅನೇಕ ಅನುಭವಿ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿಈ ಸಿನಿಮಾಗೆ ಕಥೆ ಬರೆದದ್ದು ಅಗ್ನಿ ಶ್ರೀಧರ್, ಶೂನ್ಯ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಚೊಚ್ಚಲು ಸಿನಿಮಾ ಕೂಡ ಇದಾಗಿದೆ.Sign in to your account
Username or Email Address


Password

 Remember Me


