ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್ ನಟಿ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಗಾಂಧಿನಗರದ ಗಲ್ಲಿಯಲ್ಲಿ ಭಾರೀ ಚರ್ಚೆ ಮೂಡಿಸಿತ್ತು. ಇದೀಗ ಈ ವಿಚಾರವಾಗಿ ಸ್ವತಃ ರಮ್ಯಾ ಅವರೇ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಹೌದು ರಮ್ಯಾ ಮತ್ತೆ ಬಿಗ್‍ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿಯೇ ಅವರು ಪದೇ, ಪದೇ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ ಮತ್ತು ಮಾಧ್ಯಮಗಳ ಮುಂದೆಯೂ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಸದ್ಯ ಈ ವಿಚಾರವಾಗಿ ರಮ್ಯಾ ತಮ್ಮ ಇನ್‍ಸ್ಟಾಗ್ರಾಮ್‍ ಸ್ಟೋರಿಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಪಕ್ಕಾನಾನು ಮತ್ತೆ ಸಿನಿಮಾ ರಂಗಕ್ಕೆ ಕಮ್‍ಬ್ಯಾಕ್ ಮಾಡುತ್ತಿದ್ದೇನೆ ಎಂಬ ಊಹಾಪೋಹಗಳು ಹರಿದಾಡುತ್ತಿರುವುದನ್ನು ಕೇಳಿದ್ದೇನೆ. ಆದರೆ ಈ ಬಗ್ಗೆ ಎಲ್ಲೂ ಕೂಡ ವರದಿಯಾಗಿಲ್ಲ. ನಾನು ಕಳೆದ ಕೆಲವು ತಿಂಗಳುಗಳಲ್ಲಿ ಕೆಲವು ಕುತೂಹಲಕಾರಿ ಸ್ಕ್ರಿಪ್ಟ್‌ಗಳನ್ನು ಕೇಳಿದ್ದೇನೆ. ಎಲ್ಲವೂ ಒಕೆ ಆದರೆ, ನನ್ನಿಂದ ಶೀಘ್ರದಲ್ಲಿಯೇ ಗುಡ್ ನ್ಯೂಸ್ ಕೇಳುತ್ತೀರಾ. ಅಲ್ಲಿಯವರೆಗೂ ನಿಮ್ಮ ಕುತೂಹಲ ಹೀಗೆ ಉಳಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.ಇತ್ತೀಚೆಗಷ್ಟೇ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮಕ್ಕೆ ರಮ್ಯಾ ಆಗಮಿಸಿದ್ದರು. ರಮ್ಯಾ ಅವರಿಗೆ ಇಷ್ಟವಾಗುವಂತಹ ಪಾತ್ರ ಸಿಕ್ಕಿದ್ದರೆ, ಇಷ್ಟು ದಿನ ಸಿನಿಮಾದಿಂದ ದೂರವಿದ್ದ ರಮ್ಯಾರನ್ನು ಮತ್ತೆ ಬಣ್ಣಹಚ್ಚುವುದು ಪಕ್ಕಾ ಎಂಬಂತೆ ಕಾಣಿಸುತ್ತದೆ. ಜೊತೆಗೆ ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ರಮ್ಯಾರನ್ನು ತೆರೆ ಮೇಲೆ ನೋಡುವ ಅವಕಾಶ ಸಿಕ್ಕಿದಂತಾಗುತ್ತದೆ ಎಂದೇ ಹೇಳಬಹುದು. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗುSign in to your account
Username or Email Address


Password

 Remember Me


