ಕಲಬುರಗಿ: ರಾಜ್ಯದ ಮುಸ್ಲಿಮರು ಮತ್ತು ಪೊಲೀಸರು ಹಿಜಬ್ ವಿಚಾರದಲ್ಲಿ ರಾಜ್ಯದ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ ಎಂದು ಜೇವರ್ಗಿ ಆಂದೋಲಾ ಕರುಣೇಶ್ವರ ಮಠದ ಹಾಗೂ ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದ್ದಾರೆ.ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಸ್ಲಿಂ ವಿದ್ಯಾರ್ಥಿಗಳು ಈಗಲೂ ಸಹ ಹಿಜಬ್ ಧರಿಸಿಯೇ ಶಾಲೆಗೆ ಆಗಮಿಸುತ್ತಿದ್ದಾರೆ. ಇವರನ್ನು ತಡೆಯುವ ತಾಕತ್ತು ಪೊಲೀಸರಿಗೆ ಇಲ್ಲವೆ ಎಂದು ಹರಿಹಾಯ್ದಿದ್ದಾರೆ. ನ್ಯಾಯಾಲಯ ಮತ್ತು ನಮ್ಮ ಸಂಘಟನೆಯ ಹಿರಿಯರ ಮಾತಿಗೆ ನಾವು ಬದ್ದರಾಗಿದ್ದೇವೆ. ಆದರೆ ಇವರು ಮಾತ್ರ ಈಗಲೂ ಸಹ ಹಿಜಬ್ ಹಾಕಿಕೊಂಡೆ ಶಾಲಾ-ಕಾಲೇಜಿಗೆ ಆಗಮಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಅಂತ ಹೊರಟ ನಮ್ಮ ಪಕ್ಷ ಇವತ್ತು ಬುದ್ಧಿ ಹೇಳಿಸಿಕೊಳ್ಳಬೇಕಾಗಿದೆ: ಮಾಧುಸ್ವಾಮಿನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದವರಿಗೆ ಒದ್ದು ಹೊರ ಹಾಕಬೇಕು. ಶೇ. 25 ರಷ್ಟು ಇರುವ ಮುಸ್ಲಿಮರೆ ನಿಮಗಿಷ್ಟು ಕೊಬ್ಬು ಇರಬೇಕಾದರೆ, ಶೇ.100ರಷ್ಟು ಇರುವ ನಾವು ಹಿಂದುಗಳಿಗೆ ಅದೆಷ್ಟು ಇರಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ನಾಚಿಕೆಯಾಗಬೇಕು ಪಕ್ಷದ ಅಧ್ಯಕ್ಷ ಗೂಂಡಾಗಿರಿ ಮಾಡುತ್ತಿದ್ದಾರೆ: ರೇಣುಕಾಚಾರ್ಯಕಾಂಗ್ರೆಸ್ ಮುಖಂಡ ಮುಕ್ರಂಖಾನ್‍ಗೆ ಸವಾಲು
ಹಿಜಬ್ ತಂಟೆಗೆ ಬಂದರೆ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಆಂದೋಲಾ ಸ್ವಾಮಿಗೆ ತುಂಡು, ತುಂಡು ಮಾಡಿ ಕತ್ತರಿಸುತ್ತೇನೆ ಎಂಬ ಕಾಂಗ್ರೆಸ್ ಮುಖಂಡ ಮುಕ್ರಂಖಾನ್ ಹೇಳಿಕೆ ಉತ್ತರ ನೀಡಿದ ಅವರು, ನಾನು ನಾಳೆ ಸೇಡಂಗೆ ಬರುತ್ತಿದ್ದೇನೆ. ತಾಕತ್ತು ಇದ್ದರೆ ನನ್ನನ್ನು ತುಂಡು, ತುಂಡು ಮಾಡಲಿ ನೋಡೋಣಾ ಎಂದು ಸವಾಲು ಹಾಕಿದ್ದಾರೆ.Sign in to your account
Username or Email Address


Password

 Remember Me


