ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಸುದ್ದಿ ಮುನ್ನೆಲೆಗೆ ಬಂದಿದೆ. ಅವರು ಕೂಡ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ. ಒಂದೊಳ್ಳೆ ಕಥೆ ಸಿಕ್ಕ ತಕ್ಷಣವೇ ಸಿನಿಮಾ ರಂಗಕ್ಕೆ ಮರುಪ್ರವೇಶ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅವರ ಈ ಸಂದೇಶ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ. ಪದ್ಮಾವತಿ ಮತ್ತೆ ವಾಪಸ್ಸಾದರೆ ಯಾವೆಲ್ಲ ಸಿನಿಮಾಗಳಲ್ಲಿ ನಟಿಸಬಹುದು, ಯಾರ ಜತೆ ತೆರೆ ಹಂಚಿಕೊಳ್ಳಬಹುದು ಹೀಗೆ ಲೆಕ್ಕಾಚಾರಗಳು ಶುರುವಾಗಿವೆ. ಇದನ್ನೂ ಓದಿ : ಎಲ್ಲ ಓಕೆಯಾದ್ರೆ ಗುಡ್‍ನ್ಯೂಸ್ ಕೊಡ್ತೀನಿ ಎಂದ ರಮ್ಯಾಕೆಲ ತಿಂಗಳುಗಳಿಂದ ಅವರು ಅತ್ತ ಸ್ಕ್ರಿಪ್ಟ್ ಗಳನ್ನು ಕೇಳುತ್ತಿರುವ ಅವರು, ಇತ್ತ ರಮ್ಯಾ ನಟನೆಯ ‘ದಿಲ್ ಕಾ ರಾಜಾ’ ತೆರೆಗೆ ಬರಲು ಕಾಯುತ್ತಿದೆ. ‘ದಿಲ್ ಕಾ ರಾಜಾ’ ರಮ್ಯಾ ಮತ್ತು ಪ್ರಜ್ವಲ್ ದೇವರಾಜ್ ಕಾಂಬಿನೇಷನ್ ನ ಚಿತ್ರ. 2014ರಲ್ಲಿ ಸೆಟ್ಟೇರಿದ ಈ ಸಿನಿಮಾ ಆ ನಂತರ ಚಿತ್ರೀಕರಣ ನಿಲ್ಲಿಸಿತ್ತು. ಚಿತ್ರದ ನಿರ್ದೇಶಕ ಸೋಮನಾಥ್ ಪಾಟೀಲ್ ನಂತರ ಸದ್ದಿಲ್ಲದೇ ಶೂಟಿಂಗ್ ಶುರು ಮಾಡಿದೆ. ಆಮೇಲೆ ಚಿತ್ರದ ಬಗ್ಗೆ ಯಾವ ಮಾಹಿತಿಯೂ ಸಿಗಲಿಲ್ಲ. 2019 ಜುಲೈನಲ್ಲಿ ಮತ್ತೇ ಈ ಚಿತ್ರಕ್ಕೆ ಮರುಜೀವ ಬಂತು. ಆಗ ಚಿತ್ರತಂಡವು ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿತು. ಟ್ರೇಲರ್ ಬಿಡುಗಡೆಯಾಗಿ ಮತ್ತೆ ಎರಡು ವರ್ಷಗಳು ಗತಿಸಿವೆ. ದಿಲ್ ಕಾ ರಾಜಾನ ಸದ್ದೇ ಇಲ್ಲ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಪಕ್ಕಾರಮ್ಯಾ ಇದೀಗ ಸಿನಿಮಾ ರಂಗಕ್ಕೆ ರೀ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಸಿಗುತ್ತಿದ್ದಂತೆಯೇ ‘ದಿಲ್ ಕಾ ರಾಜಾ’ ಸಿನಿಮಾ ಸುದ್ದಿಯೂ ಮುನ್ನೆಲೆಗೆ ಬಂದಿದೆ. ಬರೋಬ್ಬರಿ ಎಂಟು ವರ್ಷಗಳಿಂದ ಈ ಸಿನಿಮಾಗಾಗಿ ಕಾಯುತ್ತಿದ್ದ ರಮ್ಯಾ ಅಭಿಮಾನಿಗಳು ಈಗಲಾದರೂ ಆ ಚಿತ್ರ ಬಿಡುಗಡೆ ಆಗಬಹುದೆ ಎಂದು ಸೋಷಿಯಲ್ ಮೀಡಿಯಾದ ಮೂಲಕ ಚಿತ್ರತಂಡಕ್ಕೆ ಕೇಳುತ್ತಿದ್ದಾರೆ. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗುಈ ಸಿನಿಮಾ ಇಷ್ಟೊಂದು ತಡವಾಗಲು ಕಾರಣ ರಮ್ಯಾ ಎನ್ನುವ ಮಾತಿತ್ತು. ರಾಜಕೀಯ ಪ್ರವೇಶ ಮತ್ತು ಬೇರೆ ಚಿತ್ರಗಳ ಡೇಟ್ ಹೊಂದಾಣಿಕೆ ಕಾರಣದಿಂದಾಗಿ ದಿಲ್ ಕಾ ರಾಜಾ ಸಿನಿಮಾ ತಂಡಕ್ಕೆ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎನ್ನಲಾಗಿತ್ತು. ಆದರೆ, ಸಿನಿಮಾ ತಡವಾಗಲು ರಮ್ಯಾ ಕಾರಣವಲ್ಲ ಎಂದು ನಿರ್ದೇಶಕರು ಸ್ಪಷ್ಟ ಪಡಿಸಿದ್ದರು. ತಡವಾಗಿದ್ದಕ್ಕೆ ಕಾರಣ ಏನೇ ಇರಲಿ.. ದಿಲ್ ಕಾ ರಾಜಾ ತೆರೆಗೆ ಬರಲಿ ಎನ್ನುವುದು ರಮ್ಯಾ ಅಭಿಮಾನಿಗಳ ಆಸೆ. ರಮ್ಯಾ ಅವರು ಮತ್ತೆ ಸಿನಿಮಾ ರಂಗ ಪ್ರವೇಶಿಸುವ ಈ ಹೊತ್ತಿನಲ್ಲಿ ಆ ಚಿತ್ರಕ್ಕೂ ಮತ್ತೆ ಮರುಜೀವ ಬರಬಹುದು.Sign in to your account
Username or Email Address


Password

 Remember Me


