ಬೆಂಗಳೂರು: ತಂದೆಯ ತಿಥಿ ಕಾರ್ಯಕ್ಕೆಂದು ಮಗಳು ಅಡುಗೆ ಮಾಡುವಾಗ ಸಿಲಿಂಡರ್ ಬ್ಲ್ಯಾಸ್ಟ್ ಆಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೆ ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.ಮಗಳು ಪರಮೇಶ್ವರಿ (42) ಮೃತ ಮಹಿಳೆ. ಕಾಶಿನಾಥ್‍ರ 6ನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಕುಟುಂಬಸ್ಥರು ತಿಥಿ ಕಾರ್ಯಕ್ಕೆ ಮಾಂಸಾಹಾರ ಅಡುಗೆ ಮಾಡಲು ಸಿಲಿಂಡರ್ ತರಿಸಿದ್ದರು. ಮನೆ ಚಿಕ್ಕದಾಗಿದ್ದು ಕೋಣೆಯಲ್ಲೇ ಸ್ಟೌವ್ ಇಟ್ಟು ಅಡುಗೆ ಮಾಡಲು ತಯಾರಿ ನಡೆಸಿದ್ದರು. ಇದೇ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಟೌವ್ ಬೆಂಕಿಯ ತೀವ್ರತೆಗೆ ಗ್ಯಾಸ್ ಫ್ಲೇಮ್ ದೊಡ್ಡದಾಗಿ ಹೊತ್ತಿಕೊಂಡಿದೆ. ಇದನ್ನೂ ಓದಿ: ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆಬೆಂಕಿಯ ತೀವ್ರತೆಯ ಪರಿಣಾಮ ಕಾಶಿನಾಥ್‍ರ ಪತ್ನಿ ಸೌಭಾಗ್ಯ (75) ದೇಹ ಹೆಚ್ಚು ಸುಟ್ಟಿದೆ. ಮಗ ಶರವಣ (43) ತಲೆ ಮತ್ತು ಕೈ ಕಾಲು, ಹೊಟ್ಟೆ ಭಾಗ ಸುಟ್ಟಿದೆ. ಸಂಬಂಧಿ ಪರಮಶಿವಂ (47) ಎರಡು ಕೈ ಕಾಲು ಸುಟ್ಟು ಹೋಗಿದೆ. ಪರಮಶಿವಂ ಪತ್ನಿ ಭುವನೇಶ್ವರಿ (40)ತಲೆ, ಎರಡು ಕೈ ಮತ್ತು ಒಂದು ಕಾಲು ಸುಟ್ಟಿದೆ. ಮತ್ತೊಬ್ಬ ಸಂಬಂಧಿ ಮಾಲಾ (60) ಕೈ , ಕತ್ತಿನ ಭಾಗ ಸುಟ್ಟಿದ್ದು, ಗಾಯಾಳುಗಳಿಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ದುಷ್ಕರ್ಮಿಗಳ ಪುಂಡಾಟ!ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


