ಬೆಂಗಳೂರು: ದುಷ್ಕರ್ಮಿಗಳು ಫುಡ್ ಡೆಲಿವರಿ ಕೊಡಲು ಹೋಗುತ್ತಿದ್ದ ಯುವಕನಿಗೆ ಲಾಂಗ್ ಮಚ್ಚು ತೋರಿಸಿ ದರೋಡೆ ಮಾಡಿದ ಘಟನೆ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 12 ಗಂಟೆಗೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಬೈಕ್‍ನಲ್ಲಿ ಫುಡ್ ಡೆಲಿವರಿ ಕೊಡಲು ಹೋಗುತ್ತಿದ್ದ ರಾಜು ಎಂಬ ಯುವಕನ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದು, ಮಧ್ಯರಾತ್ರಿ ದರೋಡೆ ಮಾಡಿದ್ದಾರೆ. ಪುಂಡರು ಯುವಕನ ಬಳಿ ಇದ್ದ ಮೊಬೈಲ್, ಹಣ ಸೇರಿ ಬೈಕ್ ಸಮೇತ ಕಿತ್ತುಕೊಂಡು ಪರಾರಿಯಾಗಿದ್ದಾರೆ. ದಮ್ಮಯ್ಯ ಅಂತ ಬೇಡಿದರೂ ಬಿಡದೇ ಲಾಂಗ್ ಬೀಸಿ ಬೆದರಿಕೆ ಹಾಕಿದ್ದಾರೆ.  ಇದನ್ನೂ ಓದಿ: ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ5 ಮಂದಿ ದುಷ್ಕರ್ಮಿಗಳ ಕೃತ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


