ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟನೆಯ ಮೂರನೇ ಸಿನಿಮಾ ‘ಹಿರಣ್ಯ’ ಇಂದು ಸೆಟ್ಟೇರಿತು. ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು ಮಾಜಿ ಸಚಿವ ಚೆಲುವನಾರಾಯಣ ಸ್ವಾಮಿ.ಈಗಾಗಲೇ ‘ಬಿಚ್ಚುಗತ್ತಿ’ ಸಿನಿಮಾದ ಮೂಲಕ ಐತಿಹಾಸಿಕ ಪಾತ್ರ ಮಾಡಿರುವ ರಾಜವರ್ಧನ್, ಹಿರಣ್ಯ ಚಿತ್ರದಲ್ಲಿ ಮತ್ತೊಂದು ಬಗೆಯ ಚಿತ್ರ ಪಾತ್ರ ಮಾಡಿದ್ದಾರಂತೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ರೀತಿಯಲ್ಲಿ ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಪಾತ್ರಕ್ಕೂ ಮತ್ತು ಸಿನಿಮಾದ ಶೀರ್ಷಿಕೆಗೂ ಸಂಬಂಧ ಇರುವುದರಿಂದ ಈ ಟೈಟಲ್ ಗಾಗಿ ಅವರು ಡಾಲಿ ಧನಂಜಯ್ ಅವರನ್ನು ಮೊರೆ ಹೋಗಿದ್ದಾರೆ. ಇದನ್ನೂ ಓದಿ: ವಕೀಲ ಜಗದೀಶ್ ಜತೆ ಸೇರಿಕೊಂಡ ಸ್ಯಾಂಡಲ್‌ವುಡ್‌ ನಿರ್ದೇಶಕ ಯಾರು?ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ಡಾಲಿ ಧನಂಜಯ್ ‘ಹಿರಣ್ಯ’ ಶೀರ್ಷಿಕೆಯನ್ನು ನೋಂದಾಯಿಸಿದ್ದರು. ಈ ಶೀರ್ಷಿಕೆಗಾಗಿ ರಾಜವರ್ಧನ್ ಕೂಡ ಅರ್ಜಿ ಸಲ್ಲಿಸಿದ್ದರಂತೆ. ಕೊನೆಗೂ ಗೆಳೆಯನ ಒತ್ತಾಸೆಗೆ ತಮ್ಮ ಶೀರ್ಷಿಕೆಯನ್ನು ಬಿಟ್ಟುಕೊಟ್ಟಿದ್ದಾರೆ ಡಾಲಿ ಧನಂಜಯ್. ಇದನ್ನೂ ಓದಿ: ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್ಪ್ರವೀಣ್ ಅವ್ಯಕ್ತ ನಿರ್ದೇಶನದಲ್ಲಿ ಹಿರಣ್ಯ ಚಿತ್ರ ಮೂಡಿ ಬರಲಿದ್ದು, ಇದೇ ಮೊದಲ ಬಾರಿಗೆ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ ಮಾಡೆಲ್ ಆಗಿರುವ ರಿಹಾನಾ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿರುವ ರಿಹಾನಾಗೆ ಮೊದಲ ಸಿನಿಮಾದಲ್ಲಿಯೇ ಸವಾಲಿನ ಪಾತ್ರ ಸಿಕ್ಕಿದೆಯಂತೆ. Sign in to your account
Username or Email Address


Password

 Remember Me


