ಬೆಂಗಳೂರು: ವಿಧಾನಸಭೆ ಮೊಗಸಾಲೆಯಲ್ಲಿ ಇಂದು ಯಡಿಯೂರಪ್ಪ ಕುಳಿತಿದ್ರು. ಯಡಿಯೂರಪ್ಪ ಇರ್ತಾರೆ ಅಂದಾಗ ಅಲ್ಲಿಗೆ ಸಚಿವರು, ಶಾಸಕರು ಬಂದು ಬಂದು ನಮಸ್ಕಾರ ಹಾಕುವ ದೃಶ್ಯ ಸಾಮಾನ್ಯವಾಗಿತ್ತು. ಆಗ ರೇಣುಕಾಚಾರ್ಯ ಬಂದು ಯಡಿಯೂರಪ್ಪಗೆ ನಮಸ್ಕರಿಸಿದ್ರು. ರೇಣುಕಾಚಾರ್ಯ ನೋಡಿದ್ದೇ ತಡ ಯಡಿಯೂರಪ್ಪ ಪ್ರೀತಿಯಿಂದ ಏನೋ ನಿಂದು ದಿನಾ, ಒಳ್ಳೆ ಜಮೀರ್ ಆಡಿದಂಗೆ ನೀನು ಆಡ್ತೀಯಲ್ಲೋ ಅಂತಾ ಮಾತಿನಿಂದ ತಿವಿದ್ರು.ಆಗ ರೇಣುಕಾಚಾರ್ಯ ರಿಯಾಕ್ಟ್ ಮಾಡಲು ಹೋಗಲೇ ಇಲ್ಲ. ಸರ್… ಅಂತಾ ದೊಡ್ಡದಾಗಿ ಸ್ಮೈಲ್ ಕೊಟ್ಟು ಸೈಡಿಗೆ ಬಂದು ನಿಂತ್ಕೊಂಡ್ರು. ಅಂದ ಹಾಗೆ ಇತ್ತೀಚೆಗೆ ರೇಣುಕಾಚಾರ್ಯ ಮಾಧ್ಯಮಗಳ ಮುಂದೆ ಹೆಚ್ಚು ಕಾಣಿಸಿಕೊಳ್ತಿದ್ದು, ಪ್ರತಿ ವಿಚಾರಕ್ಕೂ ರಿಯಾಕ್ಟ್ ಮಾಡ್ತಿರುವುದನ್ನು ಯಡಿಯೂರಪ್ಪ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ವಿವಾದ – ಅಪ್ರಾಪ್ತ ಬಾಲಕಿಯರ ವೈಯಕ್ತಿಕ ವಿವರ ಟ್ವೀಟ್‌ ಮಾಡ್ತಿದೆ ಬಿಜೆಪಿ: ಶಿವಸೇನಾ ಸಂಸದೆ ತರಾಟೆಹಾಗಾಗಿಯೇ ರೇಣುಕಾಚಾರ್ಯ ಸಿಕ್ಕಾಗ ಸ್ವಲ್ಪ ಕಡಿಮೆ ಮಾಡು ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ ಅಂತಾ ಕೆಲ ಶಾಸಕರು ಮಾತನಾಡಿಕೊಳ್ತಿದ್ರು. ಇದನ್ನೂ ಓದಿ: ಕೋಮುವಾದ ರಾಜಕಾರಣದ ವಿರುದ್ಧ ಕೆಸಿಆರ್ ಹೋರಾಟ – ಬೆಂಬಲ ವ್ಯಕ್ತಪಡಿಸಿದ ಹೆಚ್‍ಡಿಡಿSign in to your account
Username or Email Address


Password

 Remember Me


