ಚಿಕ್ಕೋಡಿ: ಕೈ, ಕಾಲು ಕಟ್ಟಿ ಹಾಕಿ ಸಿನಿಮಾ ರೀತಿಯಲ್ಲಿ ಮನೆಯನ್ನ ದರೋಡೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.ಪಟ್ಟಣದ ಹೊರವಲಯದಲ್ಲಿರುವ ಎರಡು ಮನೆಗಳಲ್ಲಿ ದರೋಡೆ ಮಾಡಲಾಗಿದ್ದು ,ಇದರಲ್ಲಿ ರಾಮ ಕಿಲ್ಲೆದಾರ ಅವರ ಮನೆಯಲ್ಲಿ ಯಾರು ಇಲ್ಲದಿದಾಗ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಶಕುಂತಲಾ ಕಿಲ್ಲೆದಾರ ಅವರ ಮನೆಗೆ ನುಗ್ಗಿ ಮನೆಯಲ್ಲಿದ್ದ ವೃದ್ಧೆ ಶಕುಂತಲಾ ಸೇರಿದಂತೆ ಮೂವರನ್ನ ಕೈಕಾಲು ಕಟ್ಟಿ ,ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿ ಕಳ್ಳತನ ಮಾಡಲಾಗಿದೆ.  ಇದನ್ನೂ ಓದಿ:  ನೀನು ಜಮೀರ್ ಥರಾ ಆಡ್ತೀಯಲ್ಲೋ – ರೇಣುಕಾಚಾರ್ಯಗೆ ಮಾತಿನಿಂದ ತಿವಿದ ಬಿಎಸ್‍ವೈಈ ಎರಡು ಮನೆಯಲ್ಲಿ ಒಟ್ಟು 140 ಗ್ರಾಂ ಚಿನ್ನ ,ಹಾಗೂ 75 ಸಾವಿರ ನಗದು ದೋಚಿ ಕಳ್ಳರ ಪರಾರಿಯಾಗಿದ್ದಾರೆ. ಸುಮಾರು ಎಂಟರಿಂದ ಹತ್ತು ಜನರು ಗುಂಪು ಏಕಾಏಕಿ ಮನೆಗೆ ನುಗ್ಗಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮನೆಯಲ್ಲಿದ್ದ ಮೂವರನ್ನು ಕಟ್ಟಿ ಹಾಕಿದ್ದಾರೆ. ಹಾಗೂ ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ ಹಾಕಿ ಮನೆಯಲ್ಲಿದ್ದ ಚಿನ್ನ ,ನಗದು ಹಣ ದರೋಡೆ ಮಾಡಿದ್ದಾರೆ ಎಂದು ಘಟನೆ ಕುರಿತು ಕುಟುಂಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್‌ ವಿವಾದ – ಅಪ್ರಾಪ್ತ ಬಾಲಕಿಯರ ವೈಯಕ್ತಿಕ ವಿವರ ಟ್ವೀಟ್‌ ಮಾಡ್ತಿದೆ ಬಿಜೆಪಿ: ಶಿವಸೇನಾ ಸಂಸದೆ ತರಾಟೆಘಟನೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಭೇಟಿ ನೀಡಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು. ಪಿಎಸ್‍ಐ ಗಣಪತಿ ಕೊಂಗನೊಳಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


